alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ಚಿತ್ರರಂಗದ ಅಸಲಿಯತ್ತು ಬಿಚ್ಚಿಟ್ಟ ಹರ್ಷಿಕಾ ಪೂಣಚ್ಚ

ಚಿತ್ರರಂಗದಲ್ಲಿನ ಕಾಸ್ಟಿಂಗ್ ಕೌಚ್ ಕುರಿತು ಈಗ ಭಾರೀ ಚರ್ಚೆ ನಡೆಯುತ್ತಿದೆ. ಟಾಲಿವುಡ್ ನಟಿ ಶ್ರೀರೆಡ್ಡಿ ಕಾಸ್ಟಿಂಗ್ ಕೌಚ್ ವಿರುದ್ದ ಪ್ರತಿಭಟನೆಗಾಗಿ ಅಲ್ಲಿನ ಫಿಲಂ ಚೇಂಬರ್ ಮುಂದೆ ಅರೆನಗ್ನರಾದ ಬಳಿಕ ದೇಶದಾದ್ಯಂತ ಇದು ಚರ್ಚೆಗೆ ಕಾರಣವಾಗಿದೆ.

ಶ್ರೀ ರೆಡ್ಡಿ ಹೇಳಿಕೆಯನ್ನು ಬೆಂಬಲಿಸಿ ಕೆಲ ಟಾಲಿವುಡ್ ನಟಿಯರು ಪತ್ರಿಕಾಗೋಷ್ಟಿ ನಡೆಸಿ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದರು. ಇದಾದ ಬಳಿಕ ಕೇವಲ ಚಿತ್ರರಂಗ ಮಾತ್ರವಲ್ಲ. ಇತರೆ ಕ್ಷೇತ್ರಗಳಲ್ಲೂ ಕಾಸ್ಟಿಂಗ್ ಕೌಚ್ ಇದೆ ಎಂದು ಕೆಲವರು ಹೇಳಿದ್ದರು.

ಇದರ ಮಧ್ಯೆ ನಟಿ ಹರ್ಷಿಕಾ ಪೂಣಚ್ಚ ತಮಗೂ ಕಾಸ್ಟಿಂಗ್ ಕೌಚ್ ಅನುಭವವಾಗಿತ್ತು ಎಂದು ಹೇಳುವ ಮೂಲಕ ಬಾಲಿವುಡ್ ನ ಮತ್ತೊಂದು ಮುಖವನ್ನು ತೆರೆದಿಟ್ಟಿದ್ದಾರೆ. ಕನ್ನಡ, ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲಿ ತಾವು ನಟಿಸಿದ್ದು, ಇಲ್ಲಿ ತಮಗೆ ಅಂತಹ ಕೆಟ್ಟ ಅನುಭವವಾಗಿರಲಿಲ್ಲ. ಆದರೆ ಬಾಲಿವುಡ್ ನಲ್ಲಿ ತಮಗೆ ಕಹಿ ಅನುಭವವಾಗಿದ್ದು, ಈ ಕಾರಣಕ್ಕೇ ಬಿಗ್ ಪ್ರಾಜೆಕ್ಟ್ ನ ಚಿತ್ರವೊಂದನ್ನು ಕೈ ಬಿಟ್ಟಿದ್ದಾಗಿ ಹೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...