alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ದೇಸಾಯಿ ಕ್ಯಾಂಪ್ ನಲ್ಲಿ ಚಿಟ್ಟೆ ಹರ್ಷಿಕಾ

ಸ್ಯಾಂಡಲ್ವುಡ್ ಚಿಟ್ಟೆ ಹರ್ಷಿಕಾ ಪೂಣಚ್ಚಗೆ ಇದು ನಿಜಕ್ಕೂ ಸೆಲೆಬ್ರೇಷನ್ ಟೈಮ್. ಯಾಕೆ ಗೊತ್ತಾ…? ಕನ್ನಡ ಚಿತ್ರರಂಗದ ಮಾಂತ್ರಿಕ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಕ್ಯಾಂಪ್ ನಲ್ಲಿ ಮತ್ತೆ ಹರ್ಷಿಕಾ ಕಾಣಿಸಿಕೊಂಡಿದ್ದಾರೆ. ರೇ….ಚಿತ್ರದ ಬಳಿಕ ಸುನೀಲ್ ಕುಮಾರ್ ದೇಸಾಯಿಯವರ ಆಕ್ಷನ್ ಕಟ್ ನಲ್ಲಿ ಹರ್ಷಿಕಾ ಪೂಣಚ್ಚ ಮತ್ತೆ ನಟಿಸುತ್ತಿದ್ದಾರೆ.

ಸಸ್ಪೆನ್ಸ್ ಥ್ರಿಲ್ಲರ್ ಆಗಿರುವ ಚಿತ್ರದೊಂದಿಗೆ ಮತ್ತೆ ಚಿತ್ರರಂಗಕ್ಕೆ ದೇಸಾಯಿ ಕಮ್ ಬ್ಯಾಕ್ ಮಾಡ್ತಿದ್ದಾರೆ. ಚಿತ್ರದ ಚಿತ್ರೀಕರಣ ಬೆಂಗಳೂರು, ಮಡಿಕೇರಿ , ಕೇರಳ ಸೇರಿದಂತೆ ಹಲವು ಕಡೆಗಳಲ್ಲಿ ಈಗಾಗ್ಲೇ ನಡೆದಿದೆ. ಠಾಕುರ್ ಅನೂಪ್ ಸಿಂಗ್ ಗೆ ಜೊತೆಯಾಗಿ ಇಂಟರೆಸ್ಟಿಂಗ್ ಪಾತ್ರದಲ್ಲಿ ನಟಿಸುತ್ತಿರೋದಾಗಿ ಹರ್ಷಿಕಾ ಹೇಳಿದ್ದಾರೆ.

ಈ ಹಿಂದೆ ಇಂತಾ ಪಾತ್ರಗಳಲ್ಲಿ ಅಭಿನಯಿಸಿಲ್ಲ . ಹಾಗಾಗಿ ಈ ಚಿತ್ರ ಬಿಡುಗಡೆಯಾದ ಮೇಲೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತೆ ಅನ್ನೋದನ್ನ ತಿಳಿಯೋಕೆ ಹರ್ಷಿಕಾ ಕಾತರರಾಗಿದ್ದಾರಂತೆ. ಸುಮನ್ ನಗರ್ ಕರ್ ಮತ್ತು ಪ್ರೇಮಾ ಹೊರತಾಗಿ ಸುನೀಲ್ ಕುಮಾರ್ ದೇಸಾಯಿ ತಮ್ಮ ಚಿತ್ರಕ್ಕೆ ಎರಡನೇ ಬಾರಿಗೆ ಆಯ್ಕೆ ಮಾಡಿದ ನಾಯಕಿಯಾಗಿದ್ದಾರೆ ಹರ್ಷಿಕಾ ಪೂಣಚ್ಚ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...