alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿರೋ ಮಹಿಳಾ ಅಧಿಕಾರಿ ಫೋಟೋ ಹಿಂದಿದೆ ಈ ಸತ್ಯ

ಇಂಟರ್ನೆಟ್ ಮೂಲಕ ನಾವು ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಬಹುದು. ಆದ್ರೆ ಅದರಲ್ಲಿ ಎಷ್ಟು ಅಸಲಿ? ಎಷ್ಟು ನಕಲಿ ಅನ್ನೋದನ್ನು ಪರಿಶೀಲಿಸುವ ಅನಿವಾರ್ಯತೆಯಿದೆ. ಇತ್ತೀಚೆಗಷ್ಟೆ ಪಂಜಾಬ್ ಪೊಲೀಸ್ ಸಮವಸ್ತ್ರ ಧರಿಸಿದ್ದ ಯುವತಿಯೊಬ್ಬಳ ಫೋಟೋ ವೈರಲ್ ಆಗಿತ್ತು.

ಆಕೆ ತೊಟ್ಟಿದ್ದ ಬ್ಯಾಡ್ಜ್ ಮೇಲೆ ಹರ್ಲೀನ್ ಮನ್ ಅನ್ನೋ ಹೆಸರಿತ್ತು. ಹರ್ಲೀನ್, ಪಂಜಾಬ್ ಪೊಲೀಸ್ ಇಲಾಖೆಯ ಸ್ಟೇಶನ್ ಹೌಸ್ ಅಧಿಕಾರಿ ಅಂತಾನೇ ಎಲ್ಲರೂ ಅಂದುಕೊಂಡಿದ್ರು. ಸುಂದರ ಅಧಿಕಾರಿಯನ್ನು ನೋಡಿ ಫಿದಾ ಆಗಿಬಿಟ್ಟಿದ್ರು. ನನ್ನನ್ನು ಅರೆಸ್ಟ್ ಮಾಡಿ ಅಂತಾ ಎಲ್ರೂ ಕ್ಯೂನಲ್ಲಿ ನಿಂತಿದ್ರು.

ಇನ್ನೊಂದಷ್ಟು ಮಂದಿ ನಾನೇ ಸರೆಂಡರ್ ಆಗ್ತೀನಿ ಅಂತಾ ಮೇಲಿಂದ ಮೇಲೆ ಟ್ವೀಟ್ ಮಾಡುತ್ತಿದ್ರು. ಫೇಸ್ಬುಕ್, ಟ್ವಿಟ್ಟರ್, ವಾಟ್ಸಾಪ್ ಎಲ್ಲಾ ಕಡೆ ಈ ಮಹಿಳಾ ಅಧಿಕಾರಿಯದ್ದೇ ಚರ್ಚೆ. ಆದ್ರೆ ವೈರಲ್ ಆಗಿರೋ ಈ ಫೋಟೋ ನಿಜವಾದ ಪೊಲೀಸ್ ಅಧಿಕಾರಿಯದ್ದಲ್ಲ. ನಟಿ ಕಾಯ್ನಾತ್ ಅರೋರಾಳದ್ದು.

ಪಂಜಾಬಿ ಚಿತ್ರವೊಂದರಲ್ಲಿ ಆಕೆ ಪೊಲೀಸ್ ಅಧಿಕಾರಿ ಪಾತ್ರ ಮಾಡ್ತಿದ್ದಾಳೆ. ಈ ಫೋಟೋ ವೈರಲ್ ಆದ ಬೆನ್ನಲ್ಲೇ ನಟಿ ಕಾಯ್ನಾತ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾಳೆ. ಫೋಟೋದಲ್ಲಿರುವವಳು ತಾನೇ ಅಂತಾ ಹೇಳುವ ಮೂಲಕ ಗೊಂದಲ ನಿವಾರಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...