alex Certify
ಕನ್ನಡ ದುನಿಯಾ       Mobile App
       

Kannada Duniya

ಹರಿಪ್ರಿಯಾ ಕಂಡು ಅಭಿಮಾನಿಗಳು ಫುಲ್ ಖುಷ್

ಸ್ಟಾರ್ ನಟರು ಎಲ್ಲೇ ಹೋದ್ರು, ಅಭಿಮಾನಿಗಳು ಫಾಲೋ ಮಾಡ್ತಾರೆ. ಅವರ ಜೊತೆಗೆ ಒಂದು ಫೋಟೋ ತೆಗೆದು ಸಾಮಾಜಿಕ ತಾಣದಲ್ಲಿ ಹಾಕೋ ಬಯಕೆ ಹೊಂದಿರುತ್ತಾರೆ. ಅಂತೆಯೇ ಸ್ಟಾರ್ ಗಳು ಸಹ ಅಭಿಮಾನಿಗಳ ಅಭಿಮಾನಕ್ಕೆ ಕರಗಿ ಸೆಲ್ಫಿಗೆ ಪೋಸ್ ನೀಡ್ತಾರೆ.

ಸೆಲ್ಫಿ ಕ್ರೇಜ್ ವ್ಯಾಪಕವಾಗಿ ಬೆಳೆದಿದೆ. ಖ್ಯಾತನಾಮರ ಮುಂದೆ ತಮ್ಮ ಮೊಬೈಲ್ ಗಳಲ್ಲಿ ಫೋಟೋ ತೆಗೆದುಕೊಳ್ಳೋದು ಹವ್ಯಾಸ. ಮಂತ್ರಾಲಯದ ಗುರುರಾಘವೇಂದ್ರರ ದರ್ಶನಕ್ಕೆ ತೆರಳಿದ್ದ ನಟಿ ಹರಿಪ್ರಿಯಾಗೂ ಈ ಬಿಸಿ ತಟ್ಟಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ಕುಟುಂಬಸ್ಥರೊಂದಿಗೆ ಪೂಜೆ ಮಾಡಲು ಹರಿಪ್ರಿಯಾ ದೇವಸ್ಥಾನಕ್ಕೆ ಆಗಮಿಸಿದ್ದರು. ಪೂಜೆ ಮುಗಿಸಿ ಪ್ರದಕ್ಷಿಣೆ ಹಾಕುವಾಗ ಅಭಿಮಾನಿಗಳು ನಟಿಯನ್ನು ಗುರುತು ಹಿಡಿದು ಫೋಟೋ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಯುವಕ, ಯುವತಿಯರು ಸೇರಿ ಹರಿಪ್ರಿಯಾ ಜೊತೆ ಫೋಟೋ ತೆಗೆಸಿಕೊಂಡು ಖುಷಿ ಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...