alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಕುರಿತು ನಟಿ ಇಶಾ ಗುಪ್ತಾ ಹೇಳಿದ್ದೇನು…?

ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾ ಹಾಗೂ ಬಾಲಿವುಡ್ ನಟಿ ಇಶಾ ಗುಪ್ತಾ ಪರಸ್ಪರ ಮೊಬೈಲ್ ನಂಬರ್ ಬದಲಿಸಿಕೊಂಡಿದ್ದು, ಪ್ರೀತಿಯಲ್ಲಿ ಬಿದ್ದಿದ್ದಾರೆ. ಇನ್ನೇನು ವಿವಾಹವಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೀಗ ಸ್ವತಃ ಇಶಾ ಗುಪ್ತಾ ನಾನು ಯಾರನ್ನೂ ಮದುವೆ ಆಗ್ತಿಲ್ಲಾ ಎಂದು ಹೇಳುವ ಮೂಲಕ ಈ ವಿಚಾರಕ್ಕೆ ತೆರೆ ಎಳೆದಿದ್ದಾರೆ.

ಪಾಂಡ್ಯಾ ಮತ್ತು ಇಶಾ ಗುಪ್ತಾ ನಡುವಿನ ಸುದ್ದಿಗಳಿಗೆ ಈವರೆಗೂ ಇವರಿಬ್ಬರು ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಈಗ ಸ್ವತಃ ಇಶಾ ಗುಪ್ತಾ ಪ್ರತಿಕ್ರಿಯೆ ನೀಡಿದ್ದು, ನಾನು ಸದ್ಯಕ್ಕಂತೂ ಯಾರನ್ನೂ ಕೂಡ ಮದುವೆ ಆಗುವುದಿಲ್ಲ. ನನ್ನ ವೈಯಕ್ತಿಕ ಬದುಕನ್ನು ಹಾಸ್ಯ ಮಾಡಲು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.

ಅಲ್ಲದೇ ತಾನು ಇನ್ನೊಬ್ಬರ ವ್ಯಕ್ತಿತ್ವವನ್ನು ತುಂಬಾ ಗೌರವಿಸುತ್ತೇನೆ. ಮಾಧ್ಯಮಗಳು ನನಗೆ ಸದಾ ಬೆಂಬಲಿಸಿವೆ ಎಂದು ಟ್ವೀಟ್ ಮಾಡಿದ್ದಾರೆ. ಇಶಾ ಗುಪ್ತಾ ಅವರ ಈ ಸ್ಪಷ್ಟನೆ ಈಗ ಎಲ್ಲರ ಹುಬ್ಬೇರುವಂತೆ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...