alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ನೇಹಿತರ ಭೇಟಿ ಬಳಿಕ ಭಾವುಕರಾದ ಬಾಲಿವುಡ್ ನಟಿ

ಕ್ಯಾನ್ಸರ್ ಗೆ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ತಮ್ಮ ಹೊಸ ಫೋಟೋವನ್ನು ಶೇರ್ ಮಾಡಿದ್ದಾರೆ. ‘ಫ್ರೆಂಡ್ ಶಿಪ್ ಡೇ’ ದಿನದಂದು ಇನ್ಸ್ಟಾಗ್ರಾಮ್ ನಲ್ಲಿ ಹಾಕಿರುವ ಫೋಟೋ ವೈರಲ್ ಆಗ್ತಿದೆ.

ಚಿಕಿತ್ಸೆ ಸಲುವಾಗಿ ಕೂದಲಿಗೆ ಕತ್ತರಿ ಹಾಕಿಕೊಂಡಿರುವ ಸೋನಾಲಿ ಬೇಂದ್ರೆ ಫೋಟೋ ಸದ್ದು ಮಾಡ್ತಾ ಇದೆ.  ತಮ್ಮ ಗೆಳತಿ, ಹೃತಿಕ್ ರೋಷನ್ ರ ಮಾಜಿ ಪತ್ನಿ ಸುಸಾನೆ ಖಾನ್ ಹಾಗೂ ಗಾಯತ್ರಿ ಜೋಶಿ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದು, ಫೋಟೋ ಸಾಮಾಜಿಕ ಜಾಲ ತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಅಲ್ಲದೇ ಕಷ್ಟ ಕಾಲದಲ್ಲಿ ತಮ್ಮ ಬೆನ್ನಿಗೆ ನಿಂತ ಸ್ನೇಹಿತರನ್ನು ನೆನೆದು ಭಾವುಕರಾಗಿದ್ದಾರೆ. ‘ನೋವನ್ನು ಮೆಟ್ಟಿ ನಿಂತ ಕ್ಷಣಗಳು ಪ್ರೇರಕ. ನನಗೆ ಖುಷಿಯಾಗೋದನ್ನೇ ಮಾಡುತ್ತಿದ್ದೇನೆ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುತ್ತಿದ್ದೇನೆ. ಧೈರ್ಯ ತುಂಬಿದವರಿಗೆ, ನನ್ನೊಂದಿಗೆ ಇರಲು ಇಚ್ಛಿಸಿದವರಿಗೆ ಹಾಗೂ ನನಗೆ ಸಹಾಯ ಮಾಡಿದವರಿಗೆ ನಾನು ತುಂಬಾ ಧನ್ಯವಾದ ತಿಳಿಸುತ್ತೇನೆ’ ಎಂದು ಸೋನಾಲಿ ಬರೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...