alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ಡಾಲ್ ಜೊತೆ ನ್ಯೂಡ್ ಮಾಡಲ್ : ರದ್ದಾಯ್ತು ಚಿತ್ರದ ಶೂಟಿಂಗ್

ಸೋನಾಕ್ಷಿ ಸಿನ್ಹಾ ಮತ್ತು ಡಯಾನಾ ಪೆಂಟಿ ಅಭಿನಯದ ಹ್ಯಾಪಿ ಬಾಗ್ ಜಾಯೇಗಿ ರಿಟರ್ನ್ಸ್ ಚಿತ್ರದ ಶೂಟಿಂಗ್ ರದ್ದಾಗಿದೆ. ಚಿತ್ರದ ಚಿತ್ರೀಕರಣ ಥೈಲ್ಯಾಂಡ್ ನಲ್ಲಿ ನಡೆಯುತ್ತಿತ್ತು. ಫಿಲ್ಮ್ ಪ್ರೋಡಕ್ಷನ್ ಹೌಸ್ ಇಂಡೋ ಬ್ಯಾಂಕಾಕ್ ಕಂಪನಿ ಲಿಮಿಡೆಟ್ ಮೇಲೆ ಬ್ಯಾಂಕಾಕ್ ಪೊಲೀಸರು ಪೋರ್ನ್ ಚಿತ್ರೀಕರಣದ ಆರೋಪ ಹೊರಿಸಿದ್ದಾರೆ.

ಬುಧವಾರ ಬ್ಯಾಂಕಾಕ್ ನಲ್ಲಿ ಶೂಟಿಂಗ್ ನಡೆಯುತ್ತಿತ್ತು. ನ್ಯೂಡ್ ಮಾಡೆಲ್, ಸೆಕ್ಸ್ ಡಾಲ್ಸ್ ಹಾಗೂ ವಯಸ್ಕರ ವಸ್ತುಗಳ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಆ ದೃಶ್ಯಗಳನ್ನು ಶೂಟ್ ಮಾಡಿದ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣ ಫೇಸ್ಬುಕ್ ಗೆ ಅಪ್ಲೋಡ್ ಮಾಡಿದ್ದಾನೆ. ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿದ ಬ್ಯಾಂಕಾಕ್ ಪೊಲೀಸರು ಶೂಟಿಂಗ್ ನಿಲ್ಲಿಸಿದ್ದಾರೆ.

ಚಿತ್ರದ ಚಿತ್ರೀಕರಣಕ್ಕೆ ನಿರ್ಮಾಪಕರು ಒಪ್ಪಿಗೆ ಪಡೆದಿದ್ದರಂತೆ. ಈ ವೇಳೆ ಬ್ಯಾಂಕಾಕ್ ಪ್ರವಾಸಿತಾಣ ಹಾಗೂ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗಬಾರದೆಂದು ಸ್ಥಳೀಯ ಅಧಿಕಾರಿಗಳು ಸೂಚನೆ ನೀಡಿದ್ದರಂತೆ. ಆದ್ರೆ ಬ್ಯಾಂಕಾಕ್ ಪ್ರದೇಶದಲ್ಲಿ ಶೂಟ್ ಮಾಡಿ ಅದನ್ನು ಚೀನಾ ಎಂದು ತೋರಿಸಲಾಗಿದೆಯಂತೆ. ಜೊತೆಗೆ ಅಶ್ಲೀಲ ದೃಶ್ಯ ಚಿತ್ರೀಕರಣವಾಗ್ತಿದೆ ಎಂದು ದೂರಿರುವ ಪೊಲೀಸರು ಕೇಸ್ ದಾಖಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...