alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ಬೆಡಗಿ ಹೇರ್ ಕಲರ್ ಗೆ ಖರ್ಚಾಯ್ತು ಭಾರೀ ಹಣ

katria hair

ಸೌಂದರ್ಯಪ್ರಜ್ಞೆ ಹೆಣ್ಣುಮಕ್ಕಳಿಗೆ ಜಾಸ್ತಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಅದರಲ್ಲೂ ಸಿನಿತಾರೆಯರಂತೂ ಸೌಂದರ್ಯ ಕಾಪಾಡಿಕೊಳ್ಳಲು ಏನೆಲ್ಲಾ ಸರ್ಕಸ್ ಮಾಡುತ್ತಾರೆ. ಫಿಟ್ ನೆಸ್, ಗ್ಲ್ಯಾಮರ್ ಗಾಗಿ ಸಿನಿಮಾ ತಾರೆಯರು ತಲೆಕೆಡಿಸಿಕೊಳ್ಳುವಷ್ಟು ಬೇರೆಯವರು ತಲೆಕೆಡಿಸಿಕೊಳ್ಳುವುದಿಲ್ಲ.

ಹೀಗೆ ಸಿನಿತಾರೆಯೊಬ್ಬರ ಹೇರ್ ಕಲರ್ ಗಾಗಿಯೇ ಬರೋಬ್ಬರಿ ಹಣ ಖರ್ಚು ಮಾಡಲಾಗಿದೆ. ಹೌದು ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಅವರು ತಮ್ಮ ಹೇರ್ ಕಲರ್ ಗಾಗಿಯೇ 55 ಲಕ್ಷ ರೂ. ಹಣವನ್ನು ಖರ್ಚು ಮಾಡಿದ್ದಾರೆ. ಬಹುನಿರೀಕ್ಷೆಯ ‘ಫಿತೂರ್’ ಸಿನಿಮಾದಲ್ಲಿನ ಗ್ಲ್ಯಾಮರಸ್ ಹಾಗೂ ವಿಶೇಷ ಶೈಲಿಯ ಹೇರ್ ಕಲರ್ ಗಾಗಿ ಕತ್ರಿನಾ ಇಷ್ಟೊಂದು ಹಣ ಖರ್ಚು ಮಾಡಿದ್ದಾರೆ. ಈ ಸಿನಿಮಾದಲ್ಲಿ ಶ್ರೀಮಂತನ ಮಗಳ ಪಾತ್ರದಲ್ಲಿ ಕತ್ರಿನಾ ಕೈಫ್ ಕಾಣಿಸಿಕೊಂಡಿದ್ದು, ಅದಕ್ಕಾಗಿ ವಿಶೇಷ ಹೇರ್ ಕಲರ್ ಮಾಡಿಸಿಕೊಂಡಿದ್ದಾರೆ.

ಸಿನಿಮಾ ತಂಡದವರು ಹೇರ್ ಕಲರಿಂಗ್ ಬಗ್ಗೆ ತಿಳಿಸಿದ್ದರಿಂದ ತಲೆಕೆಡಿಸಿಕೊಂಡ ಕತ್ರಿನಾ ಎಲ್ಲೆಲ್ಲೋ ಹುಡುಕಿ ಕೊನೆಗೆ ಲಂಡನ್ ಮೂಲದ ಹೇರ್ ಕಲರ್ ಬಗ್ಗೆ ಪರಿಣತಿ ಹೊಂದಿದ್ದವರನ್ನು ಸಂಪರ್ಕಿಸಿದ್ದಾರೆ. ಅವರು ಹಾಗೂ ಚಿತ್ರ ತಂಡದ ಸಲಹೆಯಂತೆ ಬರೋಬ್ಬರಿ 55 ಲಕ್ಷ ರೂ. ಖರ್ಚು ಮಾಡಿ ಹೇರ್ ಗೆ ಕಲರ್ ಹಾಕಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...