alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ `ಅಲ್ಲಾದ್ದೀನ್’ಹುಡುಕಾಟ ನಡೆಸಿದ ಹಾಲಿವುಡ್ ನಿರ್ದೇಶಕ

images-1

ಹಾಲಿವುಡ್ ಪ್ರಸಿದ್ದ ಚಿತ್ರ ನಿರ್ದೇಶಕ ಗಯ್ ರಿಚೀ ಪ್ರಸಿದ್ದ ಡಿಸ್ನಿ ಕ್ಯಾರೆಕ್ಟರ್ ಅಲ್ಲಾದ್ದೀನ್ ಚಿತ್ರ ಮಾಡಲು ಮುಂದಾಗಿದ್ದಾರೆ. ಅಲ್ಲಾದ್ದೀನ್ ಪಾತ್ರದಲ್ಲಿ ಭಾರತೀಯರನ್ನು ನೋಡುವ ಆಸೆ ಗಯ್ ರಿಚೀಯವರದ್ದು. ಭಾರತೀಯರಿಗೆ ಪಾತ್ರನೀಡಲು ಗಯ್ ಮುಂದಾಗಿದ್ದಾರೆ.

ಮಾಧ್ಯಮಗಳ ವರದಿ ಪ್ರಕಾರ ರಿಚೀ ಈ ಸಂಬಂಧ ಮುಂಬೈನ ಕಾಸ್ಟಿಂಗ್  ಡೈರೆಕ್ಟರ್ ಟೆಸ್ ಜೋಸೆಫ್ ಜೊತೆ ಮಾತುಕತೆ ನಡೆಸಿದ್ದಾರೆ. ಅಲ್ಲಾದ್ದೀನ್ ಹಾಗೂ ಜಾಸ್ಮಿನ್ ಪಾತ್ರಗಳಿಗೆ ಕಲಾವಿಧರ ಆಯ್ಕೆ ಮಾಡಿಕೊಡುವಂತೆ ಜೋಸೆಫ್ ಗೆ ಹೇಳಿದ್ದಾರೆ ಎನ್ನಲಾಗಿದೆ. ಈ ಹಿಂದೆ ಲೈಫ್ ಆಫ್ ಫೈ, ದಿ ನೇಮ್ಸೇಕ್, ಲಯನ್ ಚಿತ್ರಗಳಿಗೆ ಜೋಸೆಫ್ ಕಾಸ್ಟಿಂಗ್ ಮಾಡಿದ್ದಾರೆ. ಹಾಲಿವುಡ್ ಚಿತ್ರಗಳಿಗೆ ಸೂಕ್ತವಾಗುವ ಭಾರತೀಯರನ್ನು ಜೋಸೆಫ್ ಆಯ್ಕೆ ಮಾಡ್ತಾರೆಂಬುದು ಗಯ್ ಅಭಿಪ್ರಾಯ.

ರಿಚೀ ಹಾಲಿವುಡ್ ಗೆ ಅನೇಕ ಪ್ರಸಿದ್ಧ ಚಿತ್ರಗಳನ್ನು ನೀಡಿದ್ದಾರೆ. 1992ರಲ್ಲಿ ಅಲ್ಲಾದ್ದೀನ್ ನ ಮೊದಲ ಚಿತ್ರ ಬಂದಿತ್ತು. ಅಲ್ಲಾದ್ದೀನ್ ಮಧ್ಯಪ್ರಾಚ್ಯ ದೇಶದಲ್ಲಿ ವಾಸವಾಗಿರುವ ಒಬ್ಬ ಹುಡುಗ. ಆತನಿಗೆ ಒಂದು ದಿನ ಮಾಯಾ ದೀಪ ಸಿಗುತ್ತದೆ. ಆ ದೀಪದಲ್ಲಿರುವ ಜಿನೀಯಿಂದಾಗಿ ಆತನ ಜೀವನ ಬದಲಾಗುತ್ತದೆ. ಮಕ್ಕಳಿಗೆ ಇಷ್ಟವಾಗುವ ಈ ಕಥೆ ಮತ್ತೊಮ್ಮೆ ಚಿತ್ರವಾಗಲಿದೆ. ರಿಚೀ ಸಿನಿಮಾದಲ್ಲಿ ಯಾರು ಸ್ಥಾನ ಪಡೆಯುತ್ತಾರೆಂಬುದು ಸದ್ಯ ಇರುವ ಕುತೂಹಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...