alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ವೈರಲ್ ಆಗಿದೆ ನಟಿ ಮಾಡಿರುವ ‘ಟ್ವೀಟ್’

ನಟಿ ಗುಲ್ ಪನಾಗ್ ಅವರ ಒಂದು ಟ್ವೀಟ್ ಪೊಲೀಸರ ಕಾರ್ಯಕ್ಕೆ ಸಾಮಾಜಿಕ ಮನ್ನಣೆ ಸಿಗುವಂತೆ ಮಾಡಿದೆ. ಅಷ್ಟೇ ಅಲ್ಲ. ಸರ್ಕಾರದಿಂದಲೂ ಅವರ ಕಾರ್ಯಕ್ಕೆ ಬಹುಮಾನ ಮತ್ತು ಶ್ಲಾಘನೆ ಸಿಗೋದಕ್ಕೆ ಕಾರಣವಾಗಿದೆ.

ಬುಧವಾರದಂದು ಪಂಜಾಬ್ ನಲ್ಲಿ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ರಸ್ತೆಗಳೆಲ್ಲಾ ಜಲಾವೃತವಾಗಿ ಬಿಟ್ಟಿದ್ದವು. ಈ ಸಂದರ್ಭದಲ್ಲಿ ಮೊಣಕಾಲು ಮಟ್ಟದವರೆಗೆ ನೀರು ನಿಂತಿದ್ದರೂ, ಟ್ರಾಫಿಕ್ ವ್ಯವಸ್ಥೆಯನ್ನ ಸರಿಪಡಿಸುವ ನಿಟ್ಟಿನಲ್ಲಿ ಇಬ್ಬರು ಸಂಚಾರಿ ಪೊಲೀಸ್ ಪೇದೆಗಳಾದ ಗುರ್ದೈನ್ ಸಿಂಗ್ ಮತ್ತು ಗುರ್ ದೇವ್ ಸಿಂಗ್ ಕೆಲಸ ಮಾಡುತ್ತಿದ್ದರು. ಇಬ್ಬರ ಫೋಟೋಗಳನ್ನ ಸಾಮಾಜಿಕ ಜಾಲತಾಣದದಲ್ಲಿ ನಟಿ ಗುಲ್ ಪನಾಗ್ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಪೊಲೀಸರ ಕಾರ್ಯ ವೈಖರಿಯನ್ನ ಗಮನಿಸಿದ ಪಂಜಾಬ್ ಮುಖ್ಯಮಂತ್ರಿ , ಡಿಜಿಪಿ ಸುರೇಶ್ ಅರೋರ ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲ ಕಚೇರಿಗೆ ಕರೆಸಿಕೊಂಡು ಇಬ್ಬರು ಪೊಲೀಸ್ ಪೇದೆಗಳನ್ನ ಸನ್ಮಾನಿಸಿದ್ದಾರೆ. ತಲಾ ಒಂದು ಸಾವಿರ ರೂಪಾಯಿ ನಗದು ಬಹುಮಾನ ಮತ್ತು ಪ್ರಶಂಸಾ ಪತ್ರಗಳನ್ನ ನೀಡಿ ಗೌರವಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...