alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಬೂಲ್ ನಲ್ಲಿ ಮೊಳಗುತ್ತಿದೆ ಶಾಂತಿಯ ಸಂಗೀತ

l_afghan-girl-146

ಜಗತ್ತಿನಲ್ಲಿ ಅತೀ ಹೆಚ್ಚಿನ ಅಶಾಂತಿಯ ತಾಣಗಳಲ್ಲಿ ಒಂದಾಗಿರುವ ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಶಾಂತಿಯ ಸಂಗೀತ ಮೀಟುತ್ತಿದ್ದಾಳೆ 12 ವರ್ಷದ ಮುರ್ಸಲ್.

 12 ವರ್ಷದ ಮುರ್ಸಲ್, ಕೆಲ ವರ್ಷದ ಹಿಂದೆ ತನ್ನ ಇಬ್ಬರು ಸಹೋದರಿಯರಾದ ಪರ್ವಾನಾ ಮತ್ತು ಖುರ್ಷಿದಾರನ್ನು ತಾಲಿಬಾನ್ ದಾಳಿಯಲ್ಲಿ ಕಳೆದುಕೊಂಡಿದ್ದಾಳೆ.
“ತನ್ನಂತೆಯೇ ಅನೇಕ ಜನರು ಒಡಹುಟ್ಟಿದವರನ್ನು ಕಳೆದುಕೊಂಡ ಬೇಸರದಲ್ಲಿರುತ್ತಾರೆ. ಅವರಿಗಾಗಿ ಹಾಗೂ ಅವರ ಮನಃಶ್ಶಾಂತಿಗಾಗಿ ನಾನು ಶಾಂತಿಯ ಗೀತೆಗಳನ್ನು ಹಾಡುತ್ತೇನೆ” ಎನ್ನುತ್ತಾಳೆ ಮುರ್ಸಲ್. ಮಿರಾಕ್ಯುಲಸ್ ಕಿಡ್ಸ್ ಎಂಬ ಹೆಸರಿನ ಈ ಸಂಗೀತ ಶಾಲೆಯಲ್ಲಿ ಮುರ್ಸಲ್ ನಂತ ಅನೇಕ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ. ಕೆಲವರು ತಾಯಿಯನ್ನು ಕಳೆದುಕೊಂಡವರಾದರೆ ಇನ್ನು ಕೆಲವರು ತಂದೆಯನ್ನು ಕಳೆದುಕೊಂಡವರಾಗಿದ್ದಾರೆ.
ಈ ಸಂಗೀತ ಶಾಲೆಯನ್ನು ಅಮೆರಿಕದ ಗಿಟಾರ್ ವಾದಕಿ ಲೌನಿ ಕೊರ್ಡೋಲಾ ನಡೆಸುತ್ತಿದ್ದಾರೆ. ಶಾಂತಿಗೆ ಸಂಬಂಧಪಟ್ಟ ಇಂಗ್ಲೀಷ್ ಗೀತೆಗಳನ್ನು ಸ್ಥಳೀಯ ಭಾಷೆಗೆ ಅನುವಾದಿಸಿ ನಂತರ ಮಕ್ಕಳು ಅದನ್ನು ಹಾಡುತ್ತಾರೆ. ಎಲ್ಲರಿಗೂ ಗಿಟಾರ್ ಹೇಳಿಕೊಡುವ ಮುರ್ಸಲ್ ಗೆ ಮುಂದೆ ತಾನು ದೊಡ್ಡ ಗಿಟಾರ್ ವಾದಕಿಯಾಬೇಕೆಂಬ ಆಸೆ ಇದೆ. ಸಂಗೀತದ ಮೂಲಕ ನೋವನ್ನು ಮರೆಸುವ ಇವಳ ಪ್ರಯತ್ನಕ್ಕೆ ಯಶಸ್ಸು ಸಿಗಲಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...