alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಗ್ ಬಿ ಮನೆಯಲ್ಲಿ ಮಾತನಾಡುವ ಭಾಷೆ ಯಾವುದು ಗೊತ್ತಾ?

ಭಾರತೀಯ ಚಿತ್ರ ರಂಗದ ದಿಗ್ಗಜ ಅಮಿತಾಬ್ ಬಚ್ಚನ್ ತಮ್ಮ‌ ಮನೆಯಲ್ಲಿ ಯಾವ ಭಾಷೆ ಮಾತನಾಡುತ್ತಾರೆ ಎಂಬ ಕುತೂಹಲ ಅನೇಕರಲ್ಲಿದೆ. ಅವರ ಕುಟುಂಬದಲ್ಲಿ ಉತ್ತರ ಭಾರತ, ದಕ್ಷಿಣ ಭಾರತ ಮತ್ತು ಕೆಲವು ಪಶ್ಚಿಮ ಬಂಗಾಳದಿಂದ ಬಂದವರು ಇದ್ದಾರೆ. ಹೀಗಾಗಿ ಅಮಿತಾಬ್ ಯಾವ ಭಾಷೆಯಲ್ಲಿ ಮಾತನಾಡುತ್ತಾರೆಂಬುದು ಕುತೂಹಲಕ್ಕೆ ಕಾರಣ. ಕೌತುಕದ ಈ ಪ್ರಶ್ನೆಗೆ ಅಮಿತಾಬ್ ಅವರೇ ಉತ್ತರ ನೀಡಿದ್ದಾರೆ.

ಕಿರು ತೆರೆಯ ಪ್ರಖ್ಯಾತ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ ಪತಿಯ ಹದಿನೆಂಟನೇ ವರ್ಷದ ಕಾರ್ಯಕ್ರಮ ಆರಂಭವಾಗುತ್ತಿದೆ. ಇದರಲ್ಲಿ ಹತ್ತನೇ ಸೀಸನ್ ನಡೆಸಿಕೊಡಲು ಅಮಿತಾಬ್ ಸಿದ್ಧವಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ವೆಬ್ ಸೈಟ್ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಅನೇಕ ಕುತೂಹಲದ ಅಂಶ ತೆರೆದಿಟ್ಟಿದ್ದಾರೆ. ಅಂದಹಾಗೆ ಕೌನ್ ಬನೇಗ ಕೋಟ್ಯಾಧಿಪತಿ ಕಾರ್ಯಕ್ರಮ ಸೆ.3 ರಿಂದ ಆರಂಭವಾಗುತ್ತಿದ್ದು, ಕಬ್ ತಕ್ ರೋಕೋ ಎಂಬ ಟ್ಯಾಗ್ ಲೈನ್ ಹೊಂದಿದೆ.

ಮನೆಯಲ್ಲಿ ಯಾವ ಭಾಷೆ ಮಾತನಾಡುತ್ತೀರಿ ಎಂದು ಸಂದರ್ಶಕ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಬಿಗ್ ಬಿ, ಕುಟುಂಬದ ಸದಸ್ಯರಲ್ಲಿ ಉತ್ತರ ಭಾರತದಿಂದ ಬಂದವರು, ದಕ್ಷಿಣ ಮತ್ತು ಕೆಲವರು ಪಶ್ಚಿಮ ಬಂಗಾಳದಿಂದ ಬಂದವರು ಇದ್ದಾರೆ. ನಾವು ಪಂಜಾಬಿ, ಹಿಂದಿ, ಬಂಗಾಳಿ ಸೇರಿದಂತೆ ಪ್ರತಿಯೊಂದು ಭಾಷೆಯನ್ನೂ ಪ್ರೋತ್ಸಾಹಿಸುತ್ತೇವೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...