alex Certify
ಕನ್ನಡ ದುನಿಯಾ       Mobile App
       

Kannada Duniya

ಅಜ್ಜಿಯ ಡಾನ್ಸ್ ನೋಡಿ ಏನೇಳ್ತಿದ್ದಾರೆ ಗೊತ್ತಾ ಜನ…?

ನವದೆಹಲಿ: ಸುದ್ದಿಯಾಗಲು ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಂಡ ಸ್ಥಿತಿ ಈಕೆಯದ್ದು. ಜತೆಗೆ ಅಜ್ಜಿಯ ಮರ್ಯಾದೆಯನ್ನೂ ಹರಾಜು ಹಾಕಿದ್ದಾಳೆ..!

ಇಷ್ಟೆಲ್ಲ ಆಗಿದ್ದು ಕೇವಲ 12 ಸೆಕೆಂಡ್‌ ನ ಡಾನ್ಸಿಂಗ್ ವಿಡಿಯೋದಿಂದ. ಇಲ್ಲಿ ಒಂದು ಇಂಗ್ಲಿಷ್ ಹಾಡಿಗೆ ಮುಖ ಕಿವುಚಿ, ನಾಲಿಗೆ ಮಡಚಿ, ಸೊಂಟ ಅಲ್ಲಾಡಿಸಿದ್ದೂ ಸಾಲದೆಂಬಂತೆ ಕೈಯತ್ತಿ ಮೊಮ್ಮಗಳು ಡಾನ್ಸ್ ಮಾಡುತ್ತಾಳೆ.

ತುಂಬಾ ಗಂಭೀರವಾಗಿ ಕ್ಯಾಮರಾ ನೋಡುತ್ತಿದ್ದ ಅಜ್ಜಿ ಮುಂದೇನು ಮಾಡುತ್ತಾಳೇನೋ ಅಂದುಕೊಳ್ಳುವಷ್ಟರಲ್ಲಿ ಮೊಮ್ಮಗಳಂತೆಯೇ ಅನುಕರಿಸಿದ್ದು, ನೆಟ್ಟಿಗರ ಚರ್ಚೆಗೆ ಆಹಾರವಾಗಿದೆ. ಕೆಲವರು ಕಿಚಾಯಿಸಿದ್ದರೆ ಮತ್ತೆ ಕೆಲವರು ಪ್ರಶಂಸಿಸಿದ್ದಾರೆ.

ಅಂದಹಾಗೆ ಈ ವಿಡಿಯೋವನ್ನು ಟ್ವಿಟರ್ ಮೂಲಕ ಅಪ್ಲೋಡ್ ಮಾಡಿದ್ದು ಮರಿಯಮ್ ಅಲಿ ಎಂಬಾಕೆ. ನನ್ನ ಈ ಕುಣಿತಕ್ಕೆ ಅಜ್ಜಿ ಕಪಾಳಕ್ಕೆ ಬಾರಿಸುತ್ತಾಳೆಂದುಕೊಂಡಿದ್ದೆ. ಆದರೆ, ಆಕೆ ನನ್ನನ್ನು ಅನುಕರಿಸಿದ್ದು ಅಚ್ಚರಿ ಮೂಡಿಸಿತು ಎಂದು ಬರೆದುಕೊಂಡಿದ್ದಾಳೆ. ಈ ವಿಡಿಯೋಗೆ 34,000 ರಿಟ್ವೀಟ್ ಹಾಗೂ 80 ಸಾವಿರಕ್ಕೂ ಹೆಚ್ಚು ಲೈಕ್ ಸಿಕ್ಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...