alex Certify
ಕನ್ನಡ ದುನಿಯಾ       Mobile App
       

Kannada Duniya

’ಪದ್ಮಾವತ್’ ಬಿಡುಗಡೆ ವೇಳೆ ನಡೆದಿತ್ತು ಈ ಸಂಚು…!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿಗಳು ಬಾಲಿವುಡ್ ಚಿತ್ರ ’ಪದ್ಮಾವತ್’ ಬಿಡುಗಡೆ ವೇಳೆ ಚಿತ್ರಮಂದಿರಗಳ ಮೇಲೆ ಪೆಟ್ರೋಲ್ ಬಾಂಬ್ ಎಸೆದು ಗಲಭೆ ಮಾಡಲು ಸಂಚು ರೂಪಿಸಿದ್ದರು ಎಂಬ ಅಂಶ ವಿಶೇಷ ತನಿಖಾ ದಳ (ಎಸ್‌ಐಟಿ) ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ರಜಪೂತ್‌ ರಾಣಿ ಪದ್ಮಾವತಿ ಕುರಿತು ಚಿತ್ರದಲ್ಲಿ ಅವಹೇಳನಕಾರಿಯಾಗಿ ತೋರಿಸಲಾಗುತ್ತಿದೆ ಎಂದು ಆರೋಪಿಸಿ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಈ ವೇಳೆ ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ ಸೇರಿದಂತೆ ಚಿತ್ರ ಬಿಡುಗಡೆಯಾಗಲಿದ್ದ ಚಿತ್ರಮಂದಿರಗಳಿಗೆ ಪೆಟ್ರೋಲ್‌ ಬಾಂಬ್‌ ಎಸೆದು ಗಲಭೆ ನಡೆಸಲು ಅಮೋಲ್‌ ಕಾಳೆ, ಸುಜಿತ್‌ ಮತ್ತಿತರ ಆರೋಪಿಗಳು ಸಂಚು ರೂಪಿಸಿದ್ದರು.

ಅಷ್ಟರಲ್ಲೇ ಗೌರಿ ಹತ್ಯೆ ಪ್ರಕರಣದಲ್ಲಿ ತನಿಖೆ ಕೈಗೊಂಡಿದ್ದ ಎಸ್‌ಐಟಿ ಪೊಲೀಸರು, ಮದ್ದೂರಿನ ಕೆ.ಟಿ. ನವೀನ್‌ಕುಮಾರ್‌ನನ್ನು ಬಂಧಿಸಿದ್ದರು. ನವೀನ್‌ಕುಮಾರ್‌ ಬಂಧನವಾಗುತ್ತಿದ್ದಂತೆ ‘ಪದ್ಮಾವತ್‌’ ಸಿನಿಮಾ ಪ್ರದರ್ಶನದ ವೇಳೆ ಗಲಭೆ ನಡೆಸುವ ಸಂಚನ್ನು ಆರೋಪಿಗಳು ಕೈಬಿಟ್ಟಿದ್ದರು ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...