alex Certify
ಕನ್ನಡ ದುನಿಯಾ       Mobile App
       

Kannada Duniya

ಗೂಸಾ ತಿಂದವನಿಗೆ 5 ಲಕ್ಷ ರೂ. ಕೊಡ್ತಾರಂತೆ ಬಾಲಿವುಡ್ ನಟ

govinda

ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ, ಸೆಟ್ ನಲ್ಲಿದ್ದ ಯುವತಿಯರೊಂದಿಗೆ ಅನುಚಿತ ವರ್ತನೆ ತೋರಿದ ಯುವಕನೊಬ್ಬನಿಗೆ ಬಾಲಿವುಡ್ ನಟರೊಬ್ಬರು ಸರಿಯಾಗಿಯೇ ಗೂಸಾ ಕೊಟ್ಟಿದ್ದಾರೆ. ಅಲ್ಲದೇ ಆ ಯುವಕನಿಗೆ ಹಣ ಕೂಡ ಕೊಟ್ಟಿದ್ದಾರೆ. ಏನಿದು ಸ್ಟೋರಿ ಎಂಬ ಕುತೂಹಲವಿದ್ದರೆ ಮುಂದೆ ಓದಿ,

ಬಾಲಿವುಡ್ ನಟ ಗೋವಿಂದ ಸುಮಾರು ವರ್ಷಗಳ ಹಿಂದೆ ‘ಮನಿ ಹೈ ತೋ ಹನಿ ಹೈ’ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸಂತೋಷ್ ರೈ ಎಂಬ ಯುವಕ ಅಲ್ಲಿಗೆ ಬಂದಿದ್ದಾನೆ. ಈತನಿಗೇನಾಯ್ತೋ ಸೆಟ್ ನಲ್ಲಿದ್ದ ಯುವತಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಇದರಿಂದ ಸಿಟ್ಟಾದ ಗೋವಿಂದ ಅಲ್ಲೇ, ಸಂತೋಷ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಸಂತೋಷ್ ಮುಂಬೈ ಪೊಲೀಸ್ ಠಾಣೆಯಲ್ಲಿ ಗೋವಿಂದ್ ವಿರುದ್ಧ ದೂರು ದಾಖಲಿಸಿದ್ದರು. ಪೊಲೀಸರು ಯಾವುದೇ ಕ್ರಮಕೈಗೊಂಡಿರಲಿಲ್ಲ ಎನ್ನಲಾಗಿದೆ.

ಇದರ ವಿರುದ್ಧ ಸಂತೋಷ್ ಸುಪ್ರೀಂ ಕೋರ್ಟ್ ನಲ್ಲಿ ಡಿಸೆಂಬರ್ ನಲ್ಲಿ  ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, 2 ವಾರದೊಳಗೆ ಕ್ಷಮೆಯಾಚಿಸಬೇಕೆಂದು ಸೂಚನೆ ನೀಡಿತ್ತು ಗೋವಿಂದ ಅವರು, ಹಲ್ಲೆ ಮಾಡಿದ್ದ ಕಾರಣಕ್ಕೆ ಸಂತೋಷ್ ಅವರಿಗೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...