alex Certify
ಕನ್ನಡ ದುನಿಯಾ       Mobile App
       

Kannada Duniya

ಫೆ. 16 ರಂದು ತೆರೆ ಕಾಣಲಿದೆ ‘ಗೂಗಲ್’

ವಿ.ನಾಗೇಂದ್ರ ಪ್ರಸಾದ್ ಹಾಗೂ ಶುಭಾ ಪೂಂಜಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಗೂಗಲ್ ಚಿತ್ರ ಫೆ.16 ರಂದು ತೆರೆ ಕಾಣಲಿದೆ. ಚಿತ್ರಪ್ರೇಮಿಗಳು ಪ್ರೋತ್ಸಾಹಿಸಬೇಕು ಎಂದು ನಿರ್ದೇಶಕ ವಿ.ನಾಗೇಂದ್ರಪ್ರಸಾದ್ ಮನವಿ ಮಾಡಿದ್ದಾರೆ.

ಶಿವಮೊಗ್ಗದಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಇದೊಂದು ಸದಭಿರುಚಿ ಚಿತ್ರವಾಗಿದ್ದು, ತಾವು ನಿರ್ದೇಶಿಸಿದ 5ನೇ ಚಿತ್ರವಾಗಿದೆ. ನಲ್ಲ ನನ್ನ ಮೊದಲ ಚಿತ್ರ. ನಾನು ಮೊದಲು ಗೀತೆ ರಚನೆಕಾರನಾಗಿ ಬಂದೆ. ಸುಮಾರು 2 ಸಾವಿರ ಹಾಡುಗಳನ್ನು ಬರೆದಿದ್ಧೆನೆ. ಈ ಚಿತ್ರದಲ್ಲಿ ನಿರ್ದೇಶನದ ಜೊತೆಗೆ ಸಂಗೀತವನ್ನು ನೀಡಿರುವೆ ಹಾಗೂ ಅಭಿನಯಿಸಿರುವೆ ಕೂಡ ಎಂದರು.

ಸುಮಾರು 17 ವರ್ಷಗಳ ಹಿಂದೆ ನಡೆದ ಸತ್ಯ ಘಟನೆಯನ್ನು ಆಧರಿಸಿ ಚಿತ್ರ ನಿರ್ಮಿಸಿದ್ದೇನೆ. ಇಲ್ಲಿ ಯಾವ ಆಡಂಬರವೂ ಇಲ್ಲ. ಪಾತ್ರಗಳೇ ಜೀವ ತುಂಬುತ್ತವೆ. ಗೂಗಲ್ ಎಂಬುದು ಒಂದು ವಿಶ್ವವ್ಯಾಪಿಯ ಅರ್ಥ ಹೊಂದಿದೆ. ಮನುಷ್ಯನ ಅಂತರಂಗವನ್ನೆಲ್ಲ ಬಹಿರಂಗೊಳಿಸುವ ಭಾವವೇ ಗೂಗಲ್ ಸರ್ಚ್ ಆಗಿದೆ ಎಂದರು.
ಈ ಚಿತ್ರದ ಟೀಸರ್ ಕೂಡ ತುಂಬಾ ಚೆನ್ನಾಗಿದೆ. ಜೋ ಲಾಲಿ ಎಂಬ ಹಾಡು ಲಕ್ಷಾಂತರ ಕೇಳುಗರನ್ನು ಸೃಷ್ಟಿಸಿದೆ. ಶಿವಮೊಗ್ಗದಲ್ಲೂ ಕೂಡ ಚಿತ್ರ ಬಿಡುಗಡೆಯಾಗಲಿದ್ದು, ಕನ್ನಡ ಸಿನೆಮಾ ನೋಡುವ ಮೂಲಕ ಪ್ರೇಕ್ಷಕರು ಪ್ರೋತ್ಸಾಹ ಕೊಡಬೇಕು ಎಂದರು. ಚಿತ್ರದಲ್ಲಿ ನಾಗೇಂದ್ರ ಪ್ರಸಾದ್, ಶುಭಾ ಪೂಂಜಾ, ದೀಪಕ್, ಶೋಭ್ ರಾಜ್, ದೀಪಕ್ ಮೊದಲಾದವರು ಅಭಿನಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...