alex Certify
ಕನ್ನಡ ದುನಿಯಾ       Mobile App
       

Kannada Duniya

ಈ ದಿನ ಶುರುವಾಗ್ತಿದೆ ಬಿಗ್ ಬಾಸ್ ಶೋ

ಬಿಗ್ ಬಾಸ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಬಿಗ್ ಬಾಸ್ ಸರಣಿ 11 ಮುಗಿಯುತ್ತಿದ್ದಂತೆ ಮುಂದಿನ ಸರಣಿ ಯಾವಾಗಿಂದ ಶುರು ಎಂದು ಪ್ರಶ್ನೆ ಮಾಡ್ತಿದ್ದ ಅಭಿಮಾನಿಗಳಿಗೆ ಈಗ ಉತ್ತರ ಸಿಕ್ಕಿದೆ. ಬಿಗ್ ಬಾಸ್ -12 ಯಾವಾಗ ಶುರುವಾಗಲಿದೆ ಎಂಬುದು ಬಹಿರಂಗವಾಗಿದೆ.

ಮಾಧ್ಯಮಗಳ ವರದಿ ಪ್ರಕಾರ ಸೆಪ್ಟೆಂಬರ್ 16 ರಂದು ಬಿಗ್ ಬಾಸ್-12 ಅದ್ಧೂರಿಯಾಗಿ ಶುರುವಾಗಲಿದೆಯಂತೆ. ತಯಾರಕರು ಬಿಗ್ ಬಾಸ್ -12 ಗೆ ಬೇಕಾದ ಎಲ್ಲ ತಯಾರಿ ಶುರು ಮಾಡಿದ್ದಾರೆ. ತಯಾರಿ ಕೊನೆ ಹಂತದಲ್ಲಿದೆ ಎಂದು ಮೂಲಗಳು ಹೇಳಿವೆ. ಅವಶ್ಯವೆನಿಸಿದ್ರೆ ಶೋ ಆರಂಭದ ದಿನಾಂಕವನ್ನು ಬದಲಾವಣೆ ಮಾಡಲಾಗುವುದು ಎನ್ನಲಾಗಿದೆ.

ಕತರೋಂಕೆ ಖಿಲಾಡಿಗಿಂತ ಮೊದಲು ಬಿಗ್ ಬಾಸ್-12 ಶುರುವಾಗಲಿದೆ ಎಂಬ ಸುದ್ದಿಯಿತ್ತು. ಬಿಗ್ ಬಾಸ್ ನಂತ್ರ ಕತರೋಂಕೆ ಖಿಲಾಡಿ ಶುರುವಾಗಲಿದೆ. ಆದ್ರೆ ಈಗಾಗಲೇ ಶೋನ ಶೂಟಿಂಗ್ ಶುರುವಾಗಿದೆ. ಬಿಗ್ ಬಾಸ್-12 ರಲ್ಲೂ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಿರೂಪಣೆ ಮಾಡಲಿದ್ದಾರೆ ಎನ್ನಲಾಗ್ತಿದೆ. ಈ ಬಾರಿ ಬಿಗ್ ಬಾಸ್ ನಲ್ಲಿ ಜೋಡಿ ಸ್ಪರ್ಧಿಗಳು ಕಾಣಿಸಲಿದ್ದಾರೆ. ಸೆಕ್ಸಿ ದಂಪತಿ, ಸಲಿಂಗ ದಂಪತಿ ಹಾಗೂ ಹದಿಹರೆಯದ ಜೋಡಿಗಳು ಕಾಣಿಸಲಿದ್ದಾರೆ ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...