alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಹಿದ್ ಕಪೂರ್ ಮನೆಗೆ ಬಂದ ಹೊಸ ಅತಿಥಿ

ಬಾಲಿವುಡ್ ನಟ ಶಾಹಿದ್ ಕಪೂರ್ ಎರಡನೇ ಬಾರಿ ತಂದೆಯಾಗಿದ್ದಾರೆ. ಶಾಹಿದ್-ಮೀರಾ ರಜಪೂತ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಬುಧವಾರ ಮುಂಬೈನ ಹಿಂದುಜಾ ಆಸ್ಪತ್ರೆಯಲ್ಲಿ ಮೀರಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಶಾಹಿದ್ ಹಾಗೂ ಮೀರಾ ಮೊದಲ ಮಗು ಮಿಶಾಗೆ ಎರಡು ವರ್ಷ. ಮೀರಾ ತಾಯಿ ಬೇಲಾ ರಜಪೂತ್ ಕೆಲ ಗಂಟೆಗಳ ಹಿಂದಷ್ಟೆ ಆಸ್ಪತ್ರೆ ಹೊರಗೆ ಕಾಣಿಸಿಕೊಂಡಿದ್ದಾರೆ. ಶಾಹಿದ್ ಸಹೋದರ ಇಶಾನ್ ಹಾಗೂ ಅವ್ರ ತಾಯಿ ನೀಲಿಮಾ ಕೂಡ ಆಸ್ಪತ್ರೆಗೆ ಬಂದಿದ್ದರು. ಶಾಹಿದ್ ಆಪ್ತ ಮೂಲವೊಂದು ಮಗುವಾಗಿರುವ ಬಗ್ಗೆ ಮಾಹಿತಿ ನೀಡಿದೆ.

ಮೀರಾ ಹಾಗೂ ಮಗು ಆರೋಗ್ಯವಾಗಿದ್ದಾರಂತೆ. ಏಪ್ರಿಲ್ ನಲ್ಲಿ ಕ್ರಿಯೇಟಿವ್ ಫೋಟೋ ಹಾಕಿ ಶಾಹಿದ್, ಮೀರಾ ಗರ್ಭಿಣಿ ಎಂಬ ವಿಷ್ಯ ತಿಳಿಸಿದ್ದರು. ಮಿಶಾ ಶೀಘ್ರವೇ ಅಕ್ಕನಾಗ್ತಿದ್ದಾಳೆ ಎಂದಿದ್ದರು. ಸೆಪ್ಟೆಂಬರ್ ನಲ್ಲಿ ಎರಡು ಖುಷಿ ಸುದ್ದಿ ಸಿಗಲಿದೆ. ಒಂದು ಸಿನಿಮಾ ಬಿಡುಗಡೆಯಾದ್ರೆ ಇನ್ನೊಂದು ಮಗು ಜನನವೆಂದು ಶಾಹಿದ್ ಹೇಳಿಕೆ ನೀಡಿದ್ದರು.

ಸದ್ಯ ವಿರಾಮದಲ್ಲಿರುವ ಶಾಹಿದ್, ಕೆಲ ದಿನಗಳಲ್ಲಿಯೇ ದೆಹಲಿಯಲ್ಲಿ ಸಿನಿಮಾ ಶೂಟಿಂಗ್ ಶುರು ಮಾಡಲಿದ್ದಾರೆ. ಎರಡನೇ ಮಗು ನಿರ್ಧಾರ ಮೀರಾದ್ದಾಗಿದ್ದು, ಶೀಘ್ರವೇ ಮೀರಾ ಕೂಡ ಕೆಲಸಕ್ಕೆ ವಾಪಸ್ ಆಗುವ ಸಾಧ್ಯತೆ ಹೆಚ್ಚಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...