alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಾಹುಬಲಿ’ ಫ್ಯಾನ್ಸ್ ಗೆ ಸಿಹಿಸುದ್ದಿ ನೀಡಿದ ರಾಜಮೌಳಿ

raj-3

ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ -2’ ಬಾಕ್ಸ್ ಆಫೀಸ್ ದಾಖಲೆಗಳನ್ನೆಲ್ಲಾ ಧೂಳೀಪಟ ಮಾಡಿದ್ದು, ರಿಲೀಸ್ ಆದ ಕೇವಲ 1 ವಾರದಲ್ಲಿ 792 ಕೋಟಿ ರೂ. ಗಳಿಸಿ ಮುನ್ನುಗ್ಗುತ್ತಿದೆ.

‘ಬಾಹುಬಲಿ’ ಮತ್ತು ‘ಬಾಹುಬಲಿ -2’ ಅದ್ಭುತ ದೃಶ್ಯ ಕಾವ್ಯಗಳಾಗಿದ್ದು, ಸಿನಿ ರಸಿಕರಂತೂ ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ.

‘ಬಾಹುಬಲಿ’ ಮತ್ತು ‘ಬಾಹುಬಲಿ -2’ ಯಶಸ್ಸಿನ ಬಳಿಕ ಮತ್ತೊಂದು ಭಾಗವನ್ನು ನಿರ್ದೇಶಿಸುವ ಕುರಿತಾಗಿ ರಾಜಮೌಳಿ ಸುಳಿವು ನೀಡಿದ್ದಾರೆ.

ಸಾಮಾನ್ಯವಾಗಿ ಸಿನಿಮಾ ಸಕ್ಸಸ್ ಆದಾಗ ಅದರ ಮುಂದುವರೆದ ಭಾಗಗಳು ಬರುತ್ತವೆ. ‘ಬಾಹುಬಲಿ’ಯನ್ನು ಕಟ್ಟಪ್ಪ ಕೊಂದಿದ್ದು ಏಕೆ ಎಂಬುದನ್ನು ರಾಜಮೌಳಿ ಭಾಗ 2 ರಲ್ಲಿ ತಿಳಿಸಿದ್ದಾರೆ. ಚಿತ್ರವನ್ನು ನೋಡುವ ಮೂಲಕ ಎಲ್ಲರೂ ಕಟ್ಟಪ್ಪ, ಬಾಹುಬಲಿ ಕೊಂದ ರಹಸ್ಯವನ್ನು ತಿಳಿದುಕೊಂಡಿದ್ದಾರೆ.

‘ಬಾಹುಬಲಿ -2’ ಸಕ್ಸಸ್ ಆದರೂ ಮತ್ತೊಂದು ಬಾಹುಬಲಿ ಬರುವ ಸಾಧ್ಯತೆಯಂತೂ ಇಲ್ಲ ಎನ್ನಲಾಗಿತ್ತು. ಆದರೆ, ರಾಜಮೌಳಿಯವರೇ ಮತ್ತೊಂದು ಬಾಹುಬಲಿ ಕುರಿತಾಗಿ ಮಾತನಾಡಿದ್ದಾರೆ.

ಮಾರುಕಟ್ಟೆ ಇದೇ ಎಂದಾಕ್ಷಣ ಸಿನಿಮಾ ಮಾಡುವುದಲ್ಲ. ಅದೂ ಪ್ರಾಮಾಣಿಕ ಪ್ರಯತ್ನವಾಗುವುದಿಲ್ಲ. ಆದರೆ, ತಂದೆಯವರು ಶಕ್ತಿಯುತವಾದ ಕತೆಯನ್ನು ಕೊಟ್ಟಲ್ಲಿ ‘ಬಾಹುಬಲಿ -3’ ಸಿನಿಮಾ ಮಾಡಲು ನಾವು ಸಿದ್ಧವಿದ್ದೇವೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...