alex Certify
ಕನ್ನಡ ದುನಿಯಾ       Mobile App
       

Kannada Duniya

200 ಕೋಟಿ ಕ್ಲಬ್ ಸೇರಿದೆ ‘ಗೋಲ್ಮಾಲ್ ಅಗೇನ್’

ರೋಹಿತ್ ಶೆಟ್ಟಿ ನಿರ್ದೇಶನದ ಬಾಲಿವುಡ್ ಚಿತ್ರ ‘ಗೋಲ್ಮಾಲ್ ಅಗೇನ್’ ಸೂಪರ್ ಹಿಟ್ ಆಗಿದೆ. ಕೇವಲ ನಾಲ್ಕು ವಾರಗಳಲ್ಲೇ 200 ಕೋಟಿ ಕ್ಲಬ್ ಸೇರಿದೆ. ಬಿಡುಗಡೆಯಾದಾಗಿನಿಂದ್ಲೂ ಗೋಲ್ಮಾಲ್ ಅಗೇನ್ ಚಿತ್ರಕ್ಕೆ ಪ್ರೇಕ್ಷಕರ ಕೊರತೆಯಾಗಿಲ್ಲ.

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿರೋ ಈ ಕಾಮಿಡಿ ಚಿತ್ರ ಸೂಪರ್ ಹಿಟ್ ಎನಿಸಿಕೊಂಡಿದೆ. ಅಮೀರ್ ಖಾನ್ ರ ಸೀಕ್ರೆಟ್ ಸೂಪರ್ ಸ್ಟಾರ್ ಚಿತ್ರದ ಪೈಪೋಟಿಯ ನಡುವೆಯೂ ಗೋಲ್ಮಾಲ್ ಅಗೇನ್ ಸಿನೆಮಾ ಭರ್ಜರಿ ಪ್ರದರ್ಶನ ಕಾಣ್ತಿದೆ.

ಬಿಡುಗಡೆಯಾದ ಮೊದಲ ವೀಕೆಂಡ್ ನಲ್ಲೇ ಕಲೆಕ್ಷನ್ 30 ಕೋಟಿ ದಾಟಿತ್ತು. ಅಜಯ್ ದೇವಗನ್, ಅರ್ಶದ್ ವಾರ್ಸಿ, ಶ್ರೇಯಸ್ ತಾಲ್ಪಡೆ, ತುಷಾರ್ ಕಪೂರ್, ಕುಣಾಲ್ ಕೇಮು, ಪರಿಣಿತಿ ಚೋಪ್ರಾ, ಟಬು, ನೀಲ್ ನಿತಿನ್ ಮುಖೇಶ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಬಹುತಾರಾಗಣದ ಈ ಚಿತ್ರ ಪ್ರೇಕ್ಷಕರ ಮನಗೆದ್ದಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...