alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ಯಾಶನ್ ಲೋಕಕ್ಕೆ ಕಾಲಿಡಲಿದ್ದಾಳೆ ‘ವಿಶ್ವದ ಅತಿ ಸುಂದರ ಬಾಲಕಿ’

ನಾಲ್ಕನೇ ವಯಸ್ಸಿಗೆ ಮಾಡೆಲಿಂಗ್ ಫೀಲ್ಡ್ ನಲ್ಲಿ ಛಾಪು ಮೂಡಿಸಿದ್ದ ‘ವರ್ಲ್ಡ್ಸ್ ಮೋಸ್ಟ್ ಬ್ಯೂಟಿಫುಲ್ ಗರ್ಲ್’ ಇದೀಗ ಜವಳಿ ಉದ್ಯಮಕ್ಕೆ ಕಾಲಿಡಲು ಮುಂದಾಗಿದ್ದು, ಶೀಘ್ರದಲ್ಲಿಯೇ ತನ್ನ ನೂತನ ಬ್ರ್ಯಾಂಡ್ ಅನ್ನು ಬಿಡುಗಡೆಗೊಳಿಸುವುದಾಗಿ ಘೋಷಿಸಿದ್ದಾಳೆ.

ಹೌದು, ನಾಲ್ಕನೇ ವಯಸ್ಸಿಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಕ್ಯಾಟ್ ವಾಕ್ ಮಾಡಿ, ಆರನೇ ವಯಸ್ಸಿಗೆ ವೇಗ್ ಎನ್ಫ್ಯಾಂಟ್ ಮ್ಯಾಗಜೀನ್‌ ನ ಕವರ್ ಪೇಜ್ ಗೆ ಫೋಸ್ ನೀಡುವ ಮೂಲಕ, ವಿಶ್ವದ ಅತಿ ಸುಂದರ ಬಾಲಕಿ ಎನ್ನುವ ಪ್ರಶಂಸೆಗೆ ಪಾತ್ರವಾಗಿದ್ದ ಮಾಡೆಲ್ ತೈಲೇನ್ ಬ್ಲಾಂಡ್, ಈಗ ತನ್ನ 17 ನೇ ವಯಸ್ಸಿನಲ್ಲಿ ನೂತನ ಬ್ರ್ಯಾಂಡ್ ಆರಂಭಿಸುವುದಾಗಿ ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಘೋಷಿಸಿದ್ದಾಳೆ.

ಫುಟ್ಬಾಲ್ ಆಟಗಾರ ಪ್ಯಾಟ್ರಿಕ್ ಬ್ಲಾಂಡ್ ಹಾಗೂ ವಿನ್ಯಾಸಕಿ ವರೋನಿಕ ಅವರ ಪುತ್ರಿಯಾದ ತೈಲೇನ್, ಅತ್ಯುತ್ತಮ ಕ್ಯಾಟ್ವಾಕ್ ಮೂಲಕ ನಾಲ್ಕನೇ ವಯಸ್ಸಿಗೆ ಮಾಡೆಲಿಂಗ್ ಕ್ಷೇತ್ರವನ್ನು ತನ್ನತ್ತ ಸೆಳೆದುಕೊಂಡಿದ್ದಳು.

ಇದೀಗ 17ನೇ ವರ್ಷಕ್ಕೆ ಕಾಲಿಟ್ಟಿರುವ ಆಕೆ, 2.4 ಮಿಲಿಯನ್ ಫಾಲೋವರ್ಸ್ ನ್ನು ಹೊಂದಿದ್ದಾಳೆ. ತನ್ನ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ತನ್ನ ನೂತನ ಪ್ರಯತ್ನದ ಬಗ್ಗೆ ಬರೆದುಕೊಂಡಿದ್ದು, “ಹೆವನ್ ಮೇ ಕ್ಲಾಥಿಂಗ್” ಎನ್ನುವ ಬ್ರ್ಯಾಂಡ್ ನ್ನು ಶೀಘ್ರದಲ್ಲಿಯೇ ನಿಮ್ಮ ಮುಂದೆ ತರಲಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

ನಾನು ಸಿದ್ಧಪಡಿಸಿರುವ ವಿಶಿಷ್ಠ ಡಿಸೈನ್ ಗಳು ಕೆಲವೇ ದಿನಗಳಲ್ಲಿ ತೋರಿಸಲಿದ್ದೇನೆ ಎಂದಿರುವ ಆಕೆ, ಬ್ರ್ಯಾಂಡ್ ನ ಮೌಲ್ಯ ಹಾಗೂ ಇತರೆ ಮಾಹಿತಿಯನ್ನು ಬಹಿರಂಗಗೊಳಿಸಿಲ್ಲ. ಆದರೆ ತೈಲನ್ ನ ಈ ಪೋಸ್ಟ್ ಗೆ ಸುಮಾರು 90 ಸಾವಿರ ಲೈಕ್ ಗಳು ಬಂದಿದ್ದು, ಅನೇಕರು ನೂತನ ಬ್ರ್ಯಾಂಡ್ ಗಾಗಿ ಕಾಯುತ್ತಿದ್ದೇವೆ ಎಂದು ಕಾಮೆಂಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...