alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಜು ಚಿತ್ರ ನಿರ್ಮಾಪಕರಿಗೆ ನೋಟೀಸ್ ನೀಡಿದ ಅಬು ಸಲೇಂ

ಈ ವರ್ಷದ ಬಹು ನಿರೀಕ್ಷಿತ ಚಿತ್ರ ಸಂಜು ಈಗಾಗಲೇ ತೆರೆ ಕಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಸಂಜು, ಬಾಲಿವುಡ್ ನಟ ಸಂಜಯ್ ದತ್ ಜೀವನಾಧಾರಿತ ಚಿತ್ರ. ಚಿತ್ರದಲ್ಲಿ ಭೂಗತ ಜಗತ್ತಿನ ಬಗ್ಗೆಯೂ ಹೇಳಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದೆ. ಜೈಲಿನಲ್ಲಿರುವ ಅಬು ಸಲೇಂ ಚಿತ್ರ ನಿರ್ಮಾಪಕರಿಗೆ ನೋಟೀಸ್ ಕಳುಹಿಸಿದ್ದಾನೆ.

ನಿಜ ಜೀವನದಲ್ಲಿ ಸಂಜಯ್ ದತ್ ರನ್ನು ಎಂದೂ ಭೇಟಿಯಾಗಿಲ್ಲವೆಂದು ಅಬು ಸಲೇಂ ಹೇಳಿದ್ದಾನೆ. ಚಿತ್ರದಲ್ಲಿ ನನ್ನನ್ನು ತಪ್ಪಾಗಿ ತೋರಿಸಲಾಗಿದೆ. ಇದಕ್ಕಾಗಿ ನಿರ್ಮಾಪಕರು 15 ದಿನಗಳೊಳಗೆ ನನ್ನ ಕ್ಷಮೆ ಕೇಳಬೇಕು. ಇಲ್ಲವೆಂದ್ರೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆಂದು ಅಬು ಸಲೇಂ ಹೇಳಿದ್ದಾನೆ.

ಚಿತ್ರದಲ್ಲಿ ರಣಬೀರ್ ಕಪೂರ್, ಅಬು ಸಲೇಂರಿಂದ ಶಸ್ತ್ರಾಸ್ತ್ರ ಕೇಳುವುದಲ್ಲದೆ ಅದನ್ನು ಮನೆಯಲ್ಲಿ ಬಚ್ಚಿಡುವುದನ್ನು ತೋರಿಸಲಾಗಿದೆ. ಈ ದೃಶ್ಯದ ವಿರುದ್ಧ ಅಬು ಸಲೇಂ ಕಿಡಿ ಕಾರಿದ್ದಾನೆ. ಚಿತ್ರ 4000 ಸ್ಕ್ರೀನ್ ಗಳಲ್ಲಿ ತೆರೆಗೆ ಬಂದಿತ್ತು. ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಮೇಲೆ ದಾಖಲೆ ಬರೆದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...