alex Certify
ಕನ್ನಡ ದುನಿಯಾ       Mobile App
       

Kannada Duniya

ಇಂದಿನಿಂದ ಸಿಡಿಯಲಿದೆ ಗೋಲ್ಡನ್ ಸ್ಟಾರ್ ‘ಪಟಾಕಿ’

patki-ss

ಗೋಲ್ಡನ್ ಸ್ಟಾರ್ ಗಣೇಶ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಪಟಾಕಿ’ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಶುಕ್ರವಾರ ‘ಪಟಾಕಿ’ ಸಿಡಿಯಲಿದ್ದು, ಸೌಂಡ್ ಜೋರಾಗಿದೆ. ತೆಲುಗಿನ ‘ಪಟಾಸ್’ ಚಿತ್ರದ ರಿಮೇಕ್ ಆಗಿರುವ ‘ಪಟಾಕಿ’ಯನ್ನು ಕನ್ನಡದ ನೇಟಿವಿಟಿಗೆ ತಕ್ಕಂತೆ ಮಂಜು ಸ್ವರಾಜ್ ನಿರ್ದೇಶಿಸಿದ್ದಾರೆ.

ಎಸ್.ವಿ. ಬಾಬು ನಿರ್ಮಾಣ ಮಾಡಿರುವ ಚಿತ್ರದಲ್ಲಿ ಗಣೇಶ್ ಅವರೊಂದಿಗೆ ಸಾಯಿಕುಮಾರ್, ಸಾಧುಕೋಕಿಲಾ, ರನ್ಯಾ, ಪ್ರಿಯಾಂಕ ಮೊದಲಾದವರು ಅಭಿನಯಿಸಿದ್ದಾರೆ.

ಆಕ್ಷನ್, ರೊಮ್ಯಾನ್ಸ್, ಕಾಮಿಡಿ ಹೀಗೆ ಎಲ್ಲವವನ್ನು ಒಳಗೊಂಡ ಕಂಪ್ಲೀಟ್ ಎಂಟರ್ ಟೈನ್ ಮೆಂಟ್ ಚಿತ್ರವಾಗಿರುವ ‘ಪಟಾಕಿ’ ಆರಂಭದಿಂದಲೂ ಕುತೂಹಲ ಕಾಯ್ದುಕೊಂಡಿದೆ. ಗಣೇಶ್ ಮೊದಲ ಬಾರಿಗೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದಾರೆ.

ರಾಜ್ಯಾದ್ಯಂತ ಶುಕ್ರವಾರ ‘ಪಟಾಕಿ’ ಸೌಂಡ್ ಮಾಡಲು ಶುರುಮಾಡಿದೆ. ಸಿನಿರಸಿಕರು ಚಿತ್ರಮಂದಿರದತ್ತ ಹೆಜ್ಜೆ ಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...