alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ’ಗಂಡುಗಲಿ ಮದಕರಿ ನಾಯಕ’

ಚಾಲೆಂಜಿಂಗ್ ಸ್ಟಾರ್ ದರ್ಶನ್ ಶೀಘ್ರದಲ್ಲಿಯೇ ವೀರಮದಕರಿ ನಾಯಕನಾಗಿ ತೆರೆಯ ಮೇಲೆ ಅಬ್ಬರಿಸಲಿದ್ದಾರೆ. ಹೌದು, ದರ್ಶನ್ ಅವರಿಗಾಗಿಯೇ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಕಾದಂಬರಿ ಆಧಾರಿತ ಅಪೂರ್ವ ಐತಿಹಾಸಿಕ ಚಿತ್ರ ನಿರ್ಮಾಣದ ಸಾಹಸಕ್ಕೆ ಕೈ ಹಾಕಿದ್ದಾರೆ.

ಸಂಗೊಳ್ಳಿ ರಾಯಣ್ಣನಾಗಿ ತೆರೆಯ ಮೇಲೆ ಗರ್ಜಿಸಿದ್ದ ದರ್ಶನ್, ಈಗ ಕುರುಕ್ಷೇತ್ರದಲ್ಲಿ ದುರ್ಯೋಧನನಾಗಿ ಮಿಂಚಿದ್ದಾರೆ. ಇನ್ನೇನು ಕುರುಕ್ಷೇತ್ರ ಚಿತ್ರ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈ ನಡುವೆಯೇ ದರ್ಶನ್ ಕೋಟೆ ನಾಡಿನ ಮದಕರಿ ನಾಯಕನಾಗಿ ಅಭಿಮಾನಿಗಳ ಮುಂದೆ ಬರಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಇನ್ನು ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಮದಕರಿ ನಾಯಕನ ಹೆಸರಲ್ಲಿ ಹಲವು ಚಿತ್ರಗಳು ಬಂದಿರುವ ಹಿನ್ನಲೆಯಲ್ಲಿ ದರ್ಶನ್ ಅಭಿನಯದ ಈ ನೂತನ ಐತಿಹಾಸಿಕ ಚರಿತ್ರೆಗೆ ’ಗಂಡುಗಲಿ ಮದಕರಿ ನಾಯಕ’ ಎಂದು ಹೆಸರಿಡಲು ನಿರ್ಧರಿಸಲಾಗಿದೆ. ಇನ್ನೊಂದು ವಿಶೇಷವೇನೆಂದರೆ ಈ ಚಿತ್ರ 1983ರಲ್ಲಿ ಬಿ.ಎಲ್. ವೇಣು ಅವರು ಬರೆದಂತಹ ಗಂಡುಗಲಿ ಮದಕರಿ ನಾಯಕ ಕಾದಂಬರಿಯನ್ನ ಆಧರಿಸಿ ನಿರ್ಮಾಣವಾಗುತ್ತಿರುವ ಚಿತ್ರವಾಗಿದ್ದು, ಜನವರಿ 15ಕ್ಕೆ ಸೆಟ್ಟೇರಲಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...