alex Certify
ಕನ್ನಡ ದುನಿಯಾ       Mobile App
       

Kannada Duniya

ಕಳೆದ ವಾರ ಪೂರ್ತಿ ಬ್ಯುಸಿಯಾಗಿದ್ದ ಡ್ಯಾನ್ಸಿಂಗ್ ಅಂಕಲ್ ಏನೇನು ಮಾಡಿದ್ದಾರೆ ಗೊತ್ತಾ?

ಸಂಬಂಧಿಯೊಬ್ಬರ ವಿವಾಹ ಕಾರ್ಯಕ್ರಮದಲ್ಲಿ ನಟ ಗೋವಿಂದರ ಹಾಡೊಂದಕ್ಕೆ ಸ್ಟೆಪ್ ಹಾಕುವ ಮೂಲಕ ರಾತ್ರೋರಾತ್ರಿ ಇಂಟರ್ನೆಟ್ ಸ್ಟಾರ್ ಆದ ಮಧ್ಯಪ್ರದೇಶದ ಭೋಪಾಲ್ ನಿವಾಸಿ ಪ್ರೊಫೆಸರ್ ಸಂಜೀವ್ ಶ್ರೀವಾತ್ಸವ್ ಈಗ ಫುಲ್ ಬ್ಯುಸಿಯಾಗಿದ್ದಾರೆ.

ಸಂಜೀವ್ ಶ್ರೀವಾತ್ಸವ್ ಅವರ ಡ್ಯಾನ್ಸ್ ನೋಡಿ ಶ್ರೀಸಾಮಾನ್ಯರಷ್ಟೇ ಅಲ್ಲ, ಬಾಲಿವುಡ್ ಸೆಲೆಬ್ರಿಟಿಗಳೂ ಫಿದಾ ಆಗಿದ್ದರು. ಸಂಜೀವ್ ಶ್ರೀವಾಸ್ತವ್ ರ ಜನಪ್ರಿಯತೆಯನ್ನು ಗಮನಿಸಿ ಮುನ್ಸಿಪಲ್ ಕಾರ್ಪೋರೇಷನ್ ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿಕೊಂಡಿತ್ತು.

ಇದೀಗ ಸಂಜೀವ್ ಶ್ರೀವಾತ್ಸವ್ ಅವರಿಗೆ ಅವಕಾಶಗಳ ಸುರಿಮಳೆಯೇ ಆಗುತ್ತಿದ್ದು, ಬಜಾಜ್ ಅಲಿಯನ್ಜಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ನಟ ಸಲ್ಮಾನ್ ಖಾನ್ ರನ್ನು ಕುಟುಂಬದೊಂದಿಗೆ ಭೇಟಿಯಾಗಿದ್ದ ಸಂಜೀವ್ ಶ್ರೀವಾತ್ಸವ್, ಬಳಿಕ 3 ಸುದ್ದಿವಾಹಿನಿಗಳ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದರು. ಹೀಗೆ ಕಳೆದ ವಾರ ಪೂರ್ತಿ ಬಿಡುವಿಲ್ಲದೆ ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದ ಸಂಜೀವ್ ಶ್ರೀವಾತ್ಸವ್, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರಿನಲ್ಲಿ ಹಲವರು ನಕಲಿ ಖಾತೆ ಆರಂಭಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...