alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ ಕಪಿಲ್ ಶರ್ಮಾ

ಖ್ಯಾತ ಕಮೆಡಿಯನ್ ಕಪಿಲ್ ಶರ್ಮಾನ ಸಂಕಷ್ಟ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಅತಿ ಹೆಚ್ಚು ಟಿ.ಆರ್.ಪಿ. ಹೊಂದಿದ್ದ ಕಾಮಿಡಿ ಶೋ ನಡೆಸಿಕೊಡುತ್ತಿದ್ದ ಕಪಿಲ್ ಶರ್ಮಾ, ಸಹ ಕಲಾವಿದರೊಂದಿಗೆ ಗಲಾಟೆ ಮಾಡಿಕೊಂಡು ತಮ್ಮ ಜನಪ್ರಿಯತೆ ಕಳೆದುಕೊಂಡಿದ್ದರು.

ಇದರೊಂದಿಗೆ ಬಾಲಿವುಡ್ ನಲ್ಲೂ ತಮ್ಮ ಅದೃಷ್ಟ ಪರೀಕ್ಷಿಸಲು ಮುಂದಾಗಿದ್ದು, ಅಲ್ಲಿಯೂ ವಿಫಲರಾಗಿದ್ದರು. ಕಳೆದ 1 ವರ್ಷದಿಂದ ತೆರೆಮರೆಯಲ್ಲಿದ್ದ ಕಪಿಲ್ ಶರ್ಮಾ ಮತ್ತೊಂದು ಶೋ ಮೂಲಕ ಟಿ.ವಿ. ಯಲ್ಲಿ ಮಿಂಚಲಿದ್ದಾರೆ ಎಂಬ ಮಾತುಗಳ ಮಧ್ಯೆ ಹೊಸ ವಿವಾದವೊಂದನ್ನು ಮೈಮೇಲೆಳೆದುಕೊಂಡಿದ್ದಾರೆ.

ದುಬೈನಲ್ಲಿ ನಡೆದ ಪಾಕಿಸ್ತಾನ್ ಸೂಪರ್ ಲೀಗ್ ಪಂದ್ಯಾವಳಿಯಲ್ಲಿ ಕಪಿಲ್ ಶರ್ಮಾ ಪಾಲ್ಗೂಂಡಿದ್ದು, ಇದಕ್ಕೆ ಶಿವಸೇನೆಯ ರಾಜ್ ಠಾಕ್ರೆ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ಪಾಕ್ ನಡುವೆ ಸಂಘರ್ಷದ ವಾತಾವರಣವಿರುವಾಗ ಉಭಯ ರಾಷ್ಟ್ರಗಳ ನಡುವಿನ ಕ್ರಿಕೆಟ್ ಪಂದ್ಯವನ್ನು ರದ್ದುಪಡಿಸಲಾಗಿದೆ. ಅಲ್ಲದೆ ಐಪಿಎಲ್ ನಲ್ಲಿ ಪಾಲ್ಗೊಳ್ಳದಂತೆ ಪಾಕ್ ಆಟಗಾರರಿಗೆ ನಿರ್ಬಂಧ ಹೇರಲಾಗಿದೆ. ಇಂತಹ ಸಂದರ್ಭದಲ್ಲಿ ಹಣದಾಸೆಗೆ ಕಪಿಲ್ ಶರ್ಮಾ, ಪಾಕಿಸ್ತಾನ್ ಸೂಪರ್ ಲೀಗ್ ನಲ್ಲಿ ಪಾಲ್ಗೊಳ್ಳುವ ಮೂಲಕ ಭಾರತೀಯರಿಗೆ ಅವಮಾನವೆನಿಸಗಿದ್ದಾರೆ. ಇವರ ಸಿನಿಮಾ ಹಾಗೂ ಟಿ.ವಿ. ಶೋ ವೀಕ್ಷಿಸದೆ ಬಿಸಿ ಮುಟ್ಟಿಸಬೇಕಿದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...