alex Certify
ಕನ್ನಡ ದುನಿಯಾ       Mobile App
       

Kannada Duniya

ದರ್ಶನ್–ಸುದೀಪ್ ಸ್ನೇಹಕ್ಕೆ ಹುಳಿ ಹಿಂಡಿದ್ದು ಯಾರು..?

friend-sude-darsh

ಸ್ಯಾಂಡಲ್ ವುಡ್ ಬಿಗ್ ಸ್ಟಾರ್ ಗಳಾದ ಸುದೀಪ್ ಮತ್ತು ದರ್ಶನ್ ಅವರ ಸ್ನೇಹ ರೋಲ್ ಮಾಡಲ್ ರೀತಿ ಇತ್ತು.

ಇಬ್ಬರ ನಡುವೆ ಸ್ನೇಹ ಮುರಿದು ಬಿದ್ದಿದೆ ಎಂಬ ಸುದ್ದಿ ಸಂಚಲನ ಮೂಡಿಸಿದೆ. ಅವರ ಸ್ನೇಹಿತರ ಬಳಗ, ಅಭಿಮಾನಿಗಳು ಬೇಸರಗೊಂಡಿದ್ದಾರೆ.

ಇಬ್ಬರೂ ಒಂದಾಗಿ ಕಾಣಿಸಿಕೊಳ್ಳಬೇಕು. ಒಂದಾಗಿ ಹೇಳಿಕೆ ನೀಡಬೇಕು. ಉಂಟಾಗಿರುವ ಗೊಂದಲಗಳಿಗೆ ತೆರೆ ಎಳೆಯಬೇಕೆಂದು ಅಭಿಮಾನಿಗಳು ಹೇಳಿದ್ದಾರೆ.

ಅಂಬರೀಶ್, ವಿಷ್ಣುವರ್ಧನ್ ಅವರಂತೆ ದರ್ಶನ್ ಮತ್ತು ಸುದೀಪ್ ಒಂದಾಗಿದ್ದಾರೆ. ಅವರ ಗೆಳೆತನ ಹಾಗೆಯೇ ಇದೆ. ಎಲ್ಲೆ ಆಗಲಿ ತಮ್ಮ ಗೆಳೆತನದ ವಿಷಯ ಬಂದಾಗ, ಒಬ್ಬರು ಮತ್ತೊಬ್ಬರ ಬಗ್ಗೆ ಮೆಚ್ಚುಗೆಯಿಂದಲೇ ಮಾತನಾಡುತ್ತಾರೆ. ಹೀಗಿರುವಾಗ, ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ವಿಷಯಗಳನ್ನು ನಂಬಲು ಆಗುತ್ತಿಲ್ಲ ಎಂದು ಅಭಿಮಾನಿಗಳು ತಿಳಿಸಿದ್ದಾರೆ.

ದರ್ಶನ್ ಟ್ವೀಟ್ ಟೈಪ್ ಬಗ್ಗೆ ಗೊತ್ತಿಲ್ಲ. ಅವರು ಮೊಬೈಲ್ ಫೋನ್ ಅನ್ನೇ ಸರಿಯಾಗಿ ಬಳಸಲ್ಲ. ದರ್ಶನ್ ಮತ್ತು ಸುದೀಪ್ ಅವರ ನಡುವೆ ಯಾರೋ ಹುಳಿ ಹಿಂಡಿರಬಹುದೆಂದು ನಟ ಬುಲೆಟ್ ಪ್ರಕಾಶ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...