alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಿ-ರಣವೀರ್ ಮದುವೆಯ ‘ವೆಲ್ ಕಂ ಡ್ರಿಂಕ್’ ಏನು ಗೊತ್ತಾ?

ಬಾಲಿವುಡ್‌ ನಲ್ಲಿಯೇ‌ ಭಾರಿ‌ ನಿರೀಕ್ಷೆ ಮೂಡಿಸಿರುವ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮದುವೆಯ ಫೋಟೋಗಳು ಯಾರಿಗೂ ಸಿಗದಿದ್ದರೂ, ಮದುವೆಯ ವೆಲ್‌ ಕಂ ಡ್ರಿಂಕ್ ಬಗ್ಗೆ ಮಾಹಿತಿ ಬಹಿರಂಗವಾಗಿದೆ.

ಹೌದು, ಇಟಲಿಯಲ್ಲಿ ಬಹು ರಹಸ್ಯ ಕಾಯ್ದುಕೊಂಡು ಮದುವೆಯಾಗುತ್ತಿರುವ ಈ ಜೋಡಿ, ತಮ್ಮ ಮದುವೆಯ ವೇಳೆ ಯಾರು ಫೋಟೋ‌ ತೆಗೆಯುವಂತಿಲ್ಲ ಎಂದಿದ್ದರು. ಆದರೀಗ ಬಾಲಿವುಡ್ ನಟ ಮನವ್ ಮಂಗಲಿ ಸಾಮಾಜಿಕ ಜಾಲತಾಣದಲ್ಲಿ ‌ವೆಲ್‌ ಕಂ‌ ಡ್ರಿಂಕ್ ಬಗ್ಗೆ ಹೇಳಿದ್ದು, ಕಾರ್ಯಕ್ರಮದಲ್ಲಿ ಫಿಲ್ಟರ್ ಕಾಫಿ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ದೀಪಿಕಾಗೆ ಕಾಫಿ‌ ಎಂದರೆ ಪಂಚಪ್ರಾಣ.‌ ಅದರಲ್ಲೂ ಕರ್ನಾಟಕದ‌ ಫಿಲ್ಟರ್ ಕಾಫಿ ಎಂದರೆ ಮತ್ತಷ್ಟು ಪ್ರೀತಿ. ಆದ್ದರಿಂದಲೇ ಬುಧವಾರ ಕೊಂಕಣಿ ಶೈಲಿಯಲ್ಲಿ ನಡೆದ ಮದುವೆಯ ವೇಳೆ‌ ಬೆಂಗಳೂರಿನ ಕಾಫಿ‌ ಪೌಡರ್‌ ನಿಂದ ತಯಾರಿಸಿದ ಫಿಲ್ಟರ್ ಕಾಫಿಯನ್ನು ನೀಡಲಾಗಿದೆ ಎಂದು ಹೇಳಲಾಗಿದೆ. ಮೊದಲು ಕೊಂಕಣಿ ಶೈಲಿಯಲ್ಲಿ‌ ಮದುವೆಯಾಗಿರುವ ಈ‌ ಜೋಡಿ, ಗುರುವಾರ ಸಿಂಧಿ ಸಂಪ್ರದಾಯದಂತೆ ಮತ್ತೊಮ್ಮೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...