alex Certify
ಕನ್ನಡ ದುನಿಯಾ       Mobile App
       

Kannada Duniya

ವಿದೇಶಿಯರನ್ನು ವಿವಾಹವಾಗಿರುವ ಬಾಲಿವುಡ್ ತಾರೆಯರು

ಪ್ರೀತಿಗೆ ದೇಶ, ಭಾಷೆಗಳ ಗಡಿ ಇಲ್ಲವೆಂದು ಹೇಳಲಾಗುತ್ತದೆ. ಈ ಮಾತು ಕೆಲ ಬಾಲಿವುಡ್ ನಟಿಯರ ಪಾಲಿಗಂತೂ ಸತ್ಯವಾಗಿದೆ. ಯಾವ್ಯಾವ ನಟಿಯರು ಯಾವ ದೇಶದವರನ್ನು ವಿವಾಹವಾಗಿದ್ದಾರೆಂಬ ಮಾಹಿತಿ ಇಲ್ಲಿದೆ.

ನಟಿ ಪ್ರೀತಿ ಜಿಂಟಾ 2016ರಲ್ಲಿ ತಮ್ಮ ಅಮೆರಿಕನ್ ಗೆಳೆಯ ಜೀನ್ ಗೂಡೆನಾಗ್ ಜೊತೆಗೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ವಿವಾಹಕ್ಕೂ ಮುನ್ನ ಐದು ವರ್ಷಗಳ ಹಿಂದೆ ಲಾಸ್ ಎಂಜಲಿಸ್ ನಲ್ಲಿ ಜೀನ್ ಗೂಡೆನಾಗ್ ರನ್ನು ಭೇಟಿಯಾಗಿದ್ದ ಪ್ರೀತಿ ಜಿಂಟಾ, 2016ರಲ್ಲಿ ವಿವಾಹವಾಗಿದ್ದರು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲಕಿಯೂ ಆಗಿರುವ ಪ್ರೀತಿ, ಐಪಿಎಲ್ ಪಂದ್ಯಾವಳಿಗಾಗಿ ಇತ್ತೀಚೆಗೆ ಭಾರತಕ್ಕೆ ಬಂದಿದ್ದರು.

ಬಾಲಿವುಡ್  ಹಾಗೂ ದಕ್ಷಿಣ ಭಾರತೀಯ ಚಲನಚಿತ್ರಗಳಲ್ಲಿ ಮಿಂಚಿರುವ ನಟಿ ಶ್ರೀಯಾ ಶರಣ್ ತಮ್ಮ ಗೆಳೆಯ ರಷ್ಯಾದ ಆಂಡ್ರ್ಯೂ ಕೋಶ್ಚಿವ್ ಜೊತೆ ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ರಾಜಸ್ಥಾನದ ಉದಯಪುರದಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. ಸಾಂಪ್ರಾದಾಯಿಕವಾಗಿ ವಿವಾಹವಾಗುವ ಮುನ್ನ ಶ್ರೀಯಾ ಶರಣ್ ದಂಪತಿ ಮುಂಬೈನಲ್ಲಿ ತಮ್ಮ ವಿವಾಹವನ್ನು ರಿಜಿಸ್ಟರ್ ಮಾಡಿಸಿದ್ದರು.

ನಟಿ ಸೆಲೀನಾ ಜೇಟ್ಲಿ 2011 ರಲ್ಲಿ ಆಸ್ಟ್ರಿಯಾದ ಉದ್ಯಮಿ ಪೀಟರ್ ಹಾಗ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ದಂಪತಿಗಳಿಗೆ ಅವಳಿ ಮಕ್ಕಳು ಇರುವುದು ವಿಶೇಷ. ವಿವಾಹವಾದ ಒಂದು ತಿಂಗಳ ಬಳಿಕ ಸೆಲೀನಾ ಈ ಗುಟ್ಟನ್ನು ಬಯಲು ಮಾಡಿದ್ದರು.

ಮತ್ತೊಬ್ಬ ಬಾಲಿವುಡ್ ನಟಿ ಲಿಸಾ ರೇ ತಮ್ಮ ಅಮೆರಿಕನ್ ಗೆಳೆಯ ಜೇಸನ್ ಡೆಹ್ನಿ ಜೊತೆ 2011 ರಲ್ಲಿ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ.

ಇದಕ್ಕೂ ಮುನ್ನ ಅಂದರೆ 2008 ರಲ್ಲಿ ತಮ್ಮ ಅಮೆರಿಕನ್ ಗೆಳೆಯ ಅಲೆಕ್ಸ್ ಓ’ನೆಲ್ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟ ನಟಿ ಶ್ವೇತ ಕೇಶ್ವಾನಿ, 2011ರಲ್ಲಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...