alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ನಟಿಯ ವಿರುದ್ದ ದಾಖಲಾಯ್ತು ದೂರು

ಭುವನೇಶ್ವರದ ಶ್ರೀ ಲಿಂಗರಾಜ್ ದೇವಾಲಯದಲ್ಲಿ ಜಾಹೀರಾತು ಚಿತ್ರೀಕರಿಸಿದ್ದಕ್ಕಾಗಿ ಬಾಲಿವುಡ್ ನಟಿ ರವೀನಾ ಟಂಡನ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.

ದೇವಾಲಯದೊಳಕ್ಕೆ ಕ್ಯಾಮರಾ ತರಲು ಅವಕಾಶವಿಲ್ಲ. ಆದ್ರೆ ದೇವಸ್ಥಾನದ ಆವರಣದಲ್ಲಿ ರವೀನಾ ಬ್ಯೂಟಿ ಟಿಪ್ಸ್ ನೀಡ್ತಿರೋ ಜಾಹೀರಾತೊಂದನ್ನು ಚಿತ್ರೀಕರಿಸಲಾಗಿದೆ. ಈ ವಿಡಿಯೋ ಕೂಡ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹಾಗಾಗಿ ದೇವಾಲಯದ ಆಡಳಿತ ಮಂಡಳಿ ರವೀನಾ ವಿರುದ್ಧ ಪ್ರಕರಣ ದಾಖಲಿಸಿದೆ.

ರವೀನಾ ವಿರುದ್ಧದ ಆರೋಪದ ಬಗ್ಗೆ ತನಿಖೆ ಮಾಡ್ತಿರೋದಾಗಿ ಪೊಲೀಸರು ತಿಳಿಸಿದ್ದಾರೆ. ದೇವಾಲಯದ ಸೇವಕರಿಗೆ ಮಾತ್ರ ಒಳಗೆ ಮೊಬೈಲ್ ತರಲು ಅವಕಾಶವಿದೆ. ಭಕ್ತರು ಯಾವುದೇ ಕಾರಣಕ್ಕೂ ಇಲ್ಲಿ ವಿಡಿಯೋ ಚಿತ್ರೀಕರಣ ಅಥವಾ ಫೋಟೋ ಕ್ಲಿಕ್ಕಿಸುವಂತಿಲ್ಲ. ರವೀನಾ, ಭಕ್ತರ ಭಾವನೆಗೆ ನೋವುಂಟು ಮಾಡಿದ್ದಾರೆ ಅಂತಾ ದೇವಾಲಯ ಆಡಳಿತ ಮಂಡಳಿ ಹೇಳಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...