alex Certify
ಕನ್ನಡ ದುನಿಯಾ       Mobile App
       

Kannada Duniya

ನಟನ ಆಸ್ತಿ ಕಬಳಿಸಲು ಸಂಚು ನಡೆಸಿದವನ ವಿರುದ್ದ ದೂರು

ಬಾಲಿವುಡ್ ಚಿತ್ರರಂಗದಲ್ಲಿ ನಾಯಕ ನಟರಾಗಿ ಮಿಂಚಿದ್ದ ದಿಲೀಪ್ ಕುಮಾರ್ ಈಗ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚೇತರಿಸಿಕೊಂಡ ಬಳಿಕ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಪತ್ನಿ ಸಾಹಿರಾ ಬಾನು, ದಿಲೀಪ್ ಕುಮಾರ್ ಅವರ ಆರೈಕೆ ನೋಡಿಕೊಳ್ಳುತ್ತಿದ್ದು, ಇದರ ಮಧ್ಯೆ ಬಾಂದ್ರಾದಲ್ಲಿರುವ ದಿಲೀಪ್ ಕುಮಾರ್ ಅವರ 250 ಕೋಟಿ ರೂ. ಮೌಲ್ಯದ ಆಸ್ತಿ ಮೇಲೆ ಬಿಲ್ಡರ್ ಒಬ್ಬ ಕಣ್ಣು ಹಾಕಿದ್ದಾನೆನ್ನಲಾಗಿದೆ. 1953 ರಲ್ಲಿ ದಿಲೀಪ್ ಕುಮಾರ್ ಈ ಆಸ್ತಿಯನ್ನು ಖರೀದಿಸಿದ್ದು, 2018 ರಲ್ಲಿ ಮರು ಅಭಿವೃದ್ದಿಪಡಿಸಲು ಪ್ರಜಿತಾ ಡೆವಲಪರ್ಸ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಬಳಿಕ ಈ ಆಸ್ತಿ ಕುರಿತ ವಿವಾದ ನ್ಯಾಯಾಲಯದ ಮೆಟ್ಟಿಲೇರಿದ್ದು, ದಿಲೀಪ್ ಕುಟುಂಬಕ್ಕೆ ಆಸ್ತಿ ಹಸ್ತಾಂತರಿಸಲು ನ್ಯಾಯಾಲಯ ಆದೇಶ ನೀಡಿದೆ. ಆದರೆ ಬಿಲ್ಡರ್ ಸಮೀರ್ ಬೋಜ್ವಾನಿ ತನಗಿರುವ ರಾಜಕೀಯ ಪ್ರಭಾವ ಬಳಸಿ ನಮಗೆ ಕಿರುಕುಳ ನೀಡುತ್ತಿದ್ದಾನೆಂದು ದಿಲೀಪ್ ಕುಮಾರ್ ಅವರ ಪತ್ನಿ ಸಾಹಿರಾ ಬಾನು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಿಗೆ ಪತ್ರ ಬರೆದಿದ್ದು, ಅವರ ನಿರ್ದೇಶನದಂತೆ ಖಾರ್ ಠಾಣೆಯಲ್ಲಿ ಬಿಲ್ಡರ್ ವಿರುದ್ದ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...