alex Certify
ಕನ್ನಡ ದುನಿಯಾ       Mobile App
       

Kannada Duniya

ಭುವನ್ ತೊಡೆ ಕಚ್ಚಿದ್ರಂತೆ ಪ್ರಥಮ್..! ಎಫ್ ಐಆರ್ ದಾಖಲು

images

ಕನ್ನಡ ಬಿಗ್ ಬಾಸ್ ಶೋ ವಿಜೇತ ಪ್ರಥಮ್ ಮತ್ತೆ ಹಳೆ ವರಸೆ ತೋರಿಸಿದ್ದಾರೆ. ಬಿಗ್ ಮನೆಯೊಳಗೊಂದೇ ಅಲ್ಲ ಮನೆ ಹೊರಗೂ ನಟ ಭುವನ್ ಹಾಗೂ ಪ್ರಥಮ್ ಕಚ್ಚಾಟ ಮುಂದುವರೆದಿದೆ. ನಟ ಭುವನ್ ಗೆ ಪ್ರಥಮ್ ಕಚ್ಚಿದ್ದಾರಂತೆ.  ಘಟನೆ ಸಂಬಂಧ ನಟ ಭುವನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಸದ್ಯ ಸಂಜು ಮತ್ತು ನಾನು ಎಂಬ ಧಾರಾವಾಹಿಯಲ್ಲಿ ನಟ ಭುವನ್ ಹಾಗೂ ಪ್ರಥಮ್  ನಟಿಸುತ್ತಿದ್ದಾರೆ. ನಿನ್ನೆ ಶೂಟಿಂಗ್ ವೇಳೆ  ಪ್ರಥಮ್ ಭುವನ್ ತೊಡೆಗೆ ಕಚ್ಚಿದ್ದಾರಂತೆ. ಈ ಸಂಬಂಧ ಭುವನ್ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಥಮ್ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಇಂದು ಪ್ರಥಮ್ ಮನೆಗೆ ಹೋಗಿದ್ದರು. ಆದ್ರೆ ಪ್ರಥಮ್ ಮನೆಯಲ್ಲಿ ಸಿಕ್ಕಿಲ್ಲ. ಹಾಗೆ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಧಾರಾವಾಹಿ ಶೂಟಿಂಗ್ ವೇಳೆ ಜಗಳ ನಡೆದಿದೆ. ಇಬ್ಬರೂ ಕೈ ಕೈ ಮಿಲಾಯಿಸಿಕೊಂಡಿದ್ದಾರೆಂದು ತಂಡ ಹೇಳಿದೆ. ಈ ಹಿಂದೆ ಕೂಡ ಪ್ರಥಮ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...