alex Certify ಈ ಸಿನಿಮಾಗಳಲ್ಲಿದೆ ಬಾಲಿವುಡ್ ಸ್ಟಾರ್ ಗಳ ರಿಯಲ್ ಮನೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸಿನಿಮಾಗಳಲ್ಲಿದೆ ಬಾಲಿವುಡ್ ಸ್ಟಾರ್ ಗಳ ರಿಯಲ್ ಮನೆ…!

6 Bollywood films that were shot at homes of big celebrities like Salman,  Shah Rukh, Amitabh, Karan Johar and others

ಸೆಲೆಬ್ರಿಟಿಗಳ ಖಾಸಗಿ ಬದುಕಿನ ಕುರಿತು ಅಭಿಮಾನಿಗಳಿಗೆ ಕುತೂಹಲವಿರುತ್ತದೆ. ಆದರೆ ಸದಾ ಬಾಡಿಗಾರ್ಡ್ ಗಳಿಂದ ಸುತ್ತುವರಿದಿರುವ ಸೆಲೆಬ್ರಿಟಿಗಳನ್ನು ಹತ್ತಿರದಿಂದ ನೋಡುವುದು ಬಲು ಕಷ್ಟ. ಅಂತಹುದರಲ್ಲಿ ಅವರುಗಳ ಮನೆ ಹೇಗಿರಬಹುದೆಂಬ ಕುತೂಹಲವಿದ್ದರೂ ಬಿಗಿಭದ್ರತೆಯ ಕಾರಣ ಕೇವಲ ಹೊರಗಿನಿಂದ ನೋಡಿ ತೃಪ್ತಿ ಪಡಬಹುದಷ್ಟೇ.

ಮುಂಬೈನಲ್ಲಿ ಖ್ಯಾತ ನಟರುಗಳಾದ ಅಮಿತಾಬ್ ಬಚ್ಚನ್, ಶಾರುಕ್ ಖಾನ್, ಸಲ್ಮಾನ್ ಖಾನ್ ಅವರುಗಳ ಬಂಗಲೆ ಪ್ರವಾಸಿ ತಾಣವಾಗಿ ಮಾರ್ಪಟ್ಟಿದ್ದು, ಪ್ರವಾಸಿಗರು ಭೇಟಿ ನೀಡುವ ಸ್ಥಳದಲ್ಲಿ ಇವುಗಳೂ ಒಂದಾಗಿದೆ. ಇವರುಗಳ ಬಂಗಲೆಯನ್ನು ಹೊರಗಿನಿಂದಷ್ಟೇ ನೋಡಿದವರು ಈ ಚಲನಚಿತ್ರಗಳಲ್ಲಿ ಅದರ ಒಳಾಂಗಣವನ್ನೂ ನೋಡಬಹುದಾಗಿದೆ. ಆ ಚಿತ್ರಗಳು ಯಾವುವು ಎಂಬುದರ ಪಟ್ಟಿ ಇಲ್ಲಿದೆ.

ಸಲ್ಮಾನ್ ಖಾನ್ ಅಭಿನಯದ ‘ಭಜರಂಗಿ ಭಾಯಿಜಾನ್’ ಚಿತ್ರ, ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳ ಪೈಕಿ ಒಂದಾಗಿದೆ. ಈ ಚಿತ್ರದ ಕೆಲವು ದೃಶ್ಯಗಳನ್ನು ಪನ್ವೇಲ್ ನಲ್ಲಿರುವ ಸಲ್ಮಾನ್ ಖಾನ್ ರ ಅರ್ಪಿತಾ ಫಾರಂನಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ.7 Films You Didn't Know Were Shot At Real Homes Of Bollywood Actors

ಶಾರುಕ್ ಖಾನ್ ರ ‘ಫ್ಯಾನ್’ ಚಿತ್ರ ಅಷ್ಟೇನೂ ಯಶಸ್ಸು ಕಾಣದಿದ್ದರೂ ಈ ಚಿತ್ರದಲ್ಲಿ ಶಾರುಕ್  ದ್ವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ದೃಶ್ಯವೊಂದನ್ನು ಶಾರುಕ್ ಖಾನ್ ರ ‘ಮನ್ನತ್’ ಬಂಗಲೆ ಎದುರು ನೈಜ ಅಭಿಮಾನಿಗಳ ಮುಂದೆಯೇ ಚಿತ್ರೀಕರಿಸಿಕೊಂಡಿರುವುದು ವಿಶೇಷ.7 Films You Didn't Know Were Shot At Real Homes Of Bollywood Actors

ಇನ್ನು ಸಂಜಯ್ ದತ್ ಜೀವನ ಆಧಾರಿತ ಚಿತ್ರದಲ್ಲಿ ರಣಬೀರ್ ಕಪೂರ್ ನಾಯಕರಾಗಿ ನಟಿಸಿದ್ದು, ಈ ಚಿತ್ರದ ಚಿತ್ರೀಕರಣವನ್ನು ಸಂಜಯ್ ದತ್ ರ ಬಂಗಲೆ ಇಂಪಿರಿಯಲ್ ಹೈಟ್ಸ್ ನಲ್ಲಿ ನಡೆಸಲಾಗಿತ್ತು.7 Films You Didn't Know Were Shot At Real Homes Of Bollywood Actors

ಶಾರುಕ್ ಖಾನ್, ಪ್ರೀತಿ ಜಿಂಟಾ ಅಭಿನಯದ ‘ವೀರ್ ಝರಾ’ ಚಿತ್ರದ ಚಿತ್ರೀಕರಣವನ್ನು ಹರಿಯಾಣದಲ್ಲಿರುವ ನಟ ಸೈಫ್ ಆಲಿ ಖಾನ್ ರ ‘ಪಟೌಡಿ ಪ್ಯಾಲೇಸ್’ ನಲ್ಲಿ ಚಿತ್ರೀಕರಿಸಲಾಗಿತ್ತು. ಇದೇ ಪ್ಯಾಲೇಸ್ ನಲ್ಲಿ ಅಮೀರ್ ಖಾನ್ ಅಭಿನಯದ ,’ರಂಗ್ ದೇ ಬಸಂತಿ’ ಚಿತ್ರದ ಚಿತ್ರೀಕರಣವೂ ನಡೆದಿತ್ತು.7 Celebrity Homes That Have Been Used For Shooting Bollywood Films -  Celebrity, Cosmopolitan India

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...