alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀದೇವಿ ಸಾವಿನ ತನಿಖೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ

ಬಾಲಿವುಡ್ ನ ಮೊದಲ ಮಹಿಳಾ ಸೂಪರ್ ಸ್ಟಾರ್ ಪಟ್ಟ ಹೊಂದಿದ್ದ ಖ್ಯಾತ ನಟಿ ಶ್ರೀದೇವಿ, ಸಂಬಂಧಿಯೊಬ್ಬರ ವಿವಾಹ ಸಮಾರಂಭಕ್ಕೆಂದು ದುಬೈಗೆ ತೆರಳಿದ್ದ ವೇಳೆ ಫೆಬ್ರವರಿ 24 ರಂದು ತಾವು ತಂಗಿದ್ದ ಹೋಟೆಲ್ ನ ಬಾತ್ ರೂಮ್ ಟಬ್ ನಲ್ಲಿ ಮುಳುಗಿ ಸಾವನ್ನಪ್ಪಿದ್ದರು.

ಆ ಸಂದರ್ಭದಲ್ಲಿ ಶ್ರೀದೇವಿ ಸಾವಿನ ಕುರಿತು ಹಲವು ಅನುಮಾನಗಳು ವ್ಯಕ್ತವಾಗಿದ್ದರೂ ತನಿಖೆ ನಡೆಸಿದ್ದ ದುಬೈ ಪೊಲೀಸರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ ಕಾರಣ ಈ ಸಾವು ಸಂಭವಿಸಿದೆ ಎಂದು ವರದಿ ನೀಡಿದ್ದರು. ಬಳಿಕ ಮುಂಬೈನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಶ್ರೀದೇವಿಯವರ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು.

ಘಟನೆ ನಡೆದು ಎರಡು ತಿಂಗಳ ಮೇಲಾದರೂ ಶ್ರೀದೇವಿ ಸಾವಿನ ಕುರಿತು ಇನ್ನೂ ಅನುಮಾನಗಳು ವ್ಯಕ್ತವಾಗುತ್ತಲೇ ಇವೆ. ಚಿತ್ರ ನಿರ್ಮಾಪಕ ಸುನೀಲ್ ಸಿಂಗ್ ಎಂಬವರು ಈಗ ಶ್ರೀದೇವಿ ಸಾವಿನ ಕುರಿತು ಸಮಗ್ರ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಅದೀಗ ವಿಚಾರಣೆಗೆ ಅಂಗೀಕಾರವಾಗಿದೆ.

ಶ್ರೀದೇವಿ ಸಾವಿನ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದು ಈ ಹಿಂದೆ ಹೇಳಿದ್ದ ಸುನೀಲ್ ಸಿಂಗ್, ಶ್ರೀದೇವಿ ಸಾವನ್ನಪ್ಪಿದ ಸಂದರ್ಭದಲ್ಲಿ ತಾವೂ ದುಬೈನಲ್ಲಿದ್ದು, ಹೋಟೆಲ್ ನ ನೌಕರರ ಬಳಿ ಮಾತನಾಡಿದಾಗ ಅವರು ಬೇರೆಯದ್ದೇ ಮಾಹಿತಿ ನೀಡಿದ್ದರು ಎಂದು ತಿಳಿಸಿದ್ದರು. ಸಾವಿನ ತನಿಖೆ ಕೋರಿ ದೆಹಲಿ ಹೈಕೋರ್ಟ್ ನಲ್ಲಿ ಸುನೀಲ್ ಸಿಂಗ್ ಅರ್ಜಿ ಸಲ್ಲಿಸಿದ್ದರಾದರೂ ಬಳಿಕ ಅದು ತಿರಸ್ಕೃತಗೊಂಡಿತ್ತು. ಇದೀಗ ಸುನೀಲ್, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇಂದು ಈ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆಯಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...