alex Certify
ಕನ್ನಡ ದುನಿಯಾ       Mobile App
       

Kannada Duniya

ಖ್ಯಾತ ಚಿತ್ರ ನಿರ್ದೇಶಕಿ ಕಲ್ಪನಾ ಲಾಜ್ಮಿ ಇನ್ನಿಲ್ಲ

ಮುಂಬೈ: ಖ್ಯಾತ ಚಿತ್ರ ನಿರ್ದೇಶಕಿ ಕಲ್ಪನಾ ಲಾಜ್ಮಿ ಇಹಲೋಕ ತ್ಯಜಿಸಿದ್ದಾರೆ. 61 ವರ್ಷದ ಲಾಜ್ಮಿ ಮೂತ್ರ ಪಿಂಡದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಭಾನುವಾರ ನಸುಕಿನಲ್ಲಿ ಅಸುನೀಗಿದರು ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.

ಮಹಿಳಾ ಕೇಂದ್ರೀಕೃತ ಚಿತ್ರಗಳಾದ ರುಡಾಲಿ, ಚಿಂಗಾರಿ, ಏಕ್ ಪಲ್, ದಮನ್ ಮುಂತಾದ ಚಿತ್ರಗಳನ್ನು ಲಾಜ್ಮಿ ಅವರು ನಿರ್ದೇಶಿಸಿದ್ದರು. ರುಡಾಲಿ ಚಿತ್ರ ನಿರ್ದೇಶನ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಎರಡೂವರೆ ದಶಕದ ಹಿಂದೆ ಶ್ಯಾಂ ಬೆನಗಲ್ ಜತೆ ಸಹಾಯಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಗಮನ ಸೆಳೆದಿದ್ದರು.

ಅವರು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಂತೆ, ನಟರಾದ ಅಮೀರ್ ಖಾನ್, ಸಲ್ಮಾನ್ ಖಾನ್, ಕರಣ್ ಜೋಹರ್, ಅಲಿಯಾ ಭಟ್, ನೀನಾ ಗುಪ್ತಾ ಸೇರಿ ಅನೇಕರು ಆರ್ಥಿಕ ನೆರವು ನೀಡಿದ್ದರು. ಲಾಜ್ಮಿ ನಿಧನ ವಾರ್ತೆ ಬರುತ್ತಿದ್ದಂತೆ ಅವರ ಸಮೀಪವರ್ತಿಗಳು, ಚಿತ್ರರಂಗದ ಗಣ್ಯರು, ಕಲಾವಿದರು, ತಂತ್ರಜ್ಞರು ಟ್ವೀಟ್ ಮಾಡಿ ಕಂಬನಿ ಮಿಡಿದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...