alex Certify
ಕನ್ನಡ ದುನಿಯಾ       Mobile App
       

Kannada Duniya

ತೆಲುಗು ಚಿತ್ರ ನಿರ್ದೇಶಕಿ ಬಿ. ಜಯಾ ಇನ್ನಿಲ್ಲ

ಟಾಲಿವುಡ್ ಇನ್ನೂ ನಟ, ನಿರ್ಮಾಪಕ ಹರಿಕೃಷ್ಣ ಅವರ ಸಾವಿನಿಂದ ಚೇತರಿಸಿಕೊಂಡಿಲ್ಲ. ಅಷ್ಟರಲ್ಲೇ ಮತ್ತೊಂದು ಶಾಕಿಂಗ್ ಸುದ್ದಿ ಎದುರಾಗಿದೆ. ತೆಲುಗು ಸಿನಿಮಾ ರಂಗದ ಮಹಿಳಾ ನಿರ್ದೇಶಕಿ ಬಿ. ಜಯಾ ಹೃದಯಾಘಾತಕ್ಕೆ ಚಿಕಿತ್ಸೆ ಪಡೆಯುವ ವೇಳೆ ಸಾವನ್ನಪ್ಪಿದ್ದಾರೆ. 54 ವರ್ಷದ ಬಿ. ಜಯಾ ಗಾಚಿಬೌಲಿಯಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕೆಲ ತಿಂಗಳ ಹಿಂದಿನಿಂದಲೂ ಜಯಾ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಹಾಗಾಗಿಯೇ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಪತ್ರಕರ್ತೆಯಾಗಿ ಜಯಾ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಅದರಲ್ಲೂ ಸಿನಿಮಾ ಕಾಲಂಗಳಲ್ಲಿ ಜಯಾ ಹೆಚ್ಚು ಖ್ಯಾತರಾಗಿದ್ದರು. ಜಯಾ ನಿರ್ದೇಶನದ ಚಂಟಿಗಾಡು ಸಿನಿಮಾ ಬಾಕ್ಸ್ ಆಫೀಸ್ ಸಕ್ಸಸ್ ಕಂಡಿತ್ತು.

ತೆಲುಗು ಚಿತ್ರರಂಗದಲ್ಲಿ ಜಯಾ ಮಹಿಳಾ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದರು. ಶಾನ್ವಿ ಶ್ರೀವಾಸ್ತವ್, ಬಾಲಾದಿತ್ಯ ಸೇರಿದಂತೆ ಟಾಲಿವುಡ್ ಗೆ ಅನೇಕ ನಟ-ನಟಿಯರನ್ನು ಪರಿಚಯಿಸಿದ ಜಯ ಇನ್ನಿಲ್ಲ ಅನ್ನೋದೇ ಈಗ ಟಾಲಿವುಡ್ ಗೆ ದುಃಖದ ಸಂಗತಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...