alex Certify
ಕನ್ನಡ ದುನಿಯಾ       Mobile App
       

Kannada Duniya

ಈಗ ಮತ್ತೊಬ್ಬ ನಟನ ವಿರುದ್ದ ಲೈಂಗಿಕ ಕಿರುಕುಳ ಆರೋಪ

ನಟ ಹಾಗೂ ನಿರ್ಮಾಪಕ ರಜತ್ ಕಪೂರ್ ಮೂರು ಜನ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಈಗ ಬಿ-ಟೌನ್ ನಲ್ಲಿ ಕೇಳಿ ಬರುತ್ತಿದೆ.

ಇಬ್ಬರು ಮಹಿಳೆಯರು ರಜತ್ ಕಪೂರ್ ಬಗ್ಗೆ ಆರೋಪಿಸಿದ ಮೆಸೇಜ್ ಅನ್ನು ಪತ್ರಕರ್ತೆ ಹಾಗೂ ಭಾರತದ ಮಿ ಟೂ ಆಂದೋಲನದ ಮುಂದಾಳತ್ವ ವಹಿಸಿಕೊಂಡಿರುವ ಸಂಧ್ಯಾ ಮೆನನ್, ಈ ಸಂದೇಶದ ಸ್ಕ್ರೀನ್ ಶಾಟ್ ಪೋಸ್ಟ್ ಮಾಡಿದ್ದಾರೆ. ಹಾಗೇ ಯು.ಎಸ್. ಮೂಲದ ನಟಿ, ಮಾಡೆಲ್ ಒಬ್ಬಳಿಗೆ ಕಪೂರ್ ನಿರಂತರವಾಗಿ ಕರೆ ಮಾಡಿ ಕಿರುಕುಳ ನೀಡುತ್ತಿರುವ ಆರೋಪವೂ ಇದೆ.

2007ರಲ್ಲಿ ಮುಖ್ಯ ದಿನಪತ್ರಿಕೆಯ ವರದಿಗಾರ್ತಿಯೊಬ್ಬರು ಕಪೂರ್ ಜತೆ ಪೋನ್ ನಲ್ಲಿ ಸಂದರ್ಶನ ನಡೆಸುತ್ತಿರುವಾಗ ಕಪೂರ್ ಸಂದರ್ಶನವನ್ನು ಬೇರೆ ದಿಕ್ಕಿಗೆ ತಿರುಗಿಸಿ ಲೈಂಗಿಕತೆಗೆ ಸಂಬಂಧಿಸಿದಂತಹ ಪ್ರಶ್ನೆಗಳನ್ನು ಕೇಳಿ ವರದಿಗಾರ್ತಿಗೆ ತೀರಾ ಮುಜುಗರವನ್ನುಂಟು ಮಾಡಿದ್ದಾರಂತೆ. ಅದು ಅಲ್ಲದೇ, ಕಪೂರ್ ಆಕೆಯ ದೇಹದ ಅಳತೆ ಎಷ್ಟು ಎಂಬಂತಹ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಹಾಗೇ ಇನ್ನೊಂದು ಮಹಿಳೆಯ ಆರೋಪವೇನೆಂದರೆ ರಜತ್ ಅವರು ತನ್ನ ಸ್ನೇಹಿತ ಸೌರಭ್ ಶುಕ್ಲಾ ಅವರ ಫೋನಿನಿಂದ ನಿರಂತರವಾಗಿ ಕರೆ ಮಾಡುತ್ತಿದ್ದರು ಹಾಗೇ ಒಂಟಿ ಮನೆಯಲ್ಲಿ ಅವಳೊಂದಿಗೆ ಚಿತ್ರವೊಂದನ್ನು ಚಿತ್ರೀಕರಿಸಬೇಕೆಂದು ಹೇಳಿದ್ದರಂತೆ. ಕಪೂರ್ ನ ಈ ದುರ್ನಡತೆ ಬಗ್ಗೆ ಶುಕ್ಲಾಗೆ ತಿಳಿದಿದೆ ಎಂದು ಮಹಿಳೆ ಆರೋಪಿಸಿದ್ದಾರೆ.

ಆದರೆ ಕಪೂರ್ ಅಕ್ಟೋಬರ್ 7 ರಂದು ತಡರಾತ್ರಿಯಂದು ‘ನನ್ನ ಮಾತು ಹಾಗೂ ವರ್ತನೆಯಿಂದ ನೋವಾಗಿದ್ದರೆ ಕ್ಷಮಿಸಿ. ನನ್ನ ಜೀವನಲ್ಲಿ ನಾನೊಬ್ಬ ಸಭ್ಯ ಮನುಷ್ಯನಾಗಲು ಪ್ರಯತ್ನಿಸಿದ್ದೇನೆ. ನನ್ನ ಕೆಲಸಕ್ಕಿಂತ ಬೇರೆ ಯಾವುದು ನನಗೆ ಮುಖ್ಯವಲ್ಲ ಎಂದೆಲ್ಲಾ ಹೇಳಿ ಟ್ವೀಟರ್ ನಲ್ಲಿ ಕ್ಷಮೆ ಕೇಳಿದ್ದಾರೆ. ಒಟ್ಟಾರೆ ಈ ಲೈಂಗಿಕ ಕಿರುಕುಳದ ಆರೋಪ ಬಿ-ಟೌನ್ ನಲ್ಲಿ ಸದ್ಯಕ್ಕೆ ಮುಗಿಯದ ಅಧ್ಯಾಯವಾಗಿರುವುದಂತು ಹೌದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...