alex Certify
ಕನ್ನಡ ದುನಿಯಾ       Mobile App
       

Kannada Duniya

ಫಿಲ್ಮ್ ಫೇರ್ ಪ್ರಶಸ್ತಿ : ವಿದ್ಯಾ ಪಾಲಾಯ್ತು ಅತ್ಯುತ್ತಮ ನಟಿ ಪ್ರಶಸ್ತಿ

2018 ರ 63ನೇ ಫಿಲ್ಮ್ ಫೇರ್ ಪ್ರಶಸ್ತಿ ಘೋಷಣೆಯಾಗಿದೆ. ಇರ್ಫಾನ್ ಗೆ ಅತ್ಯುತ್ತಮ ನಟ ಹಾಗೂ ವಿದ್ಯಾ ಬಾಲನ್ ಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿದೆ. ವಿಮರ್ಶಕರ ವಿಭಾಗದಲ್ಲಿ ರಾಜ್ಕುಮಾರ್ ರಾವ್ ಗೆ ಅತ್ಯುತ್ತಮ ನಟ ಹಾಗೂ ಜೈರಾ ವಾಸೀಂಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.

ಹಿಂದಿ ಮೀಡಿಯಂ ಅತ್ಯುತ್ತಮ ಚಿತ್ರ ಪ್ರಶಸ್ತಿ ಬಾಚಿಕೊಂಡಿದೆ. ವಿಮರ್ಶಕರ ವಿಭಾಗದಲ್ಲಿ ನ್ಯೂಟನ್ ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಿಕ್ಕಿದೆ. ಬರೇಲಿ ಕೀ ಬರ್ಫಿ ಚಿತ್ರದ ನಿರ್ದೇಶಕಿ ಅಶ್ವಿನಿ ಅಯ್ಯರ್ ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ದಕ್ಕಿದೆ. ತುಮ್ಹಾರಿ ಸುಲು ಚಿತ್ರದ ಅಭಿನಯಕ್ಕೆ ವಿದ್ಯಾ ಬಾಲನ್ ಅತ್ಯುತ್ತಮ ನಟಿ ಪ್ರಶಸ್ತಿ ಬಾಚಿಕೊಂಡ್ರೆ, ಹಿಂದಿ ಮೀಡಿಯಂ ಚಿತ್ರದ ಅಭಿನಯಕ್ಕೆ ಇರ್ಫಾನ್ ಅತ್ಯುತ್ತಮ ನಟ ಪ್ರಶಸ್ತಿ ಗಳಿಸಿದ್ದಾರೆ.

ಜ್ಯೂಸ್ ಗೆ ಬೆಸ್ಟ್ ಶಾರ್ಟ್ ಫಿಲ್ಮ್ ಪ್ರಶಸ್ತಿ ಬಂದಿದೆ. ಬೆಸ್ಟ್ ಮ್ಯೂಸಿಕ್ ಅಲ್ಬಂ ಪ್ರಶಸ್ತಿಯನ್ನು ಜಗ್ಗಾ ಜಾಸೂಸ್ ಬಾಚಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...