alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಾ! ಈ ಚಿತ್ರದಲ್ಲಿದ್ದ ಹಾಡುಗಳೆಷ್ಟು ಗೊತ್ತಾ…?

Indrasabha_4455ಒಂದು ಚಲನಚಿತ್ರದಲ್ಲಿ ಸಾಮಾನ್ಯವಾಗಿ 5 ರಿಂದ 6 ಹಾಡುಗಳಿರುತ್ತವೆ. ಇನ್ನೂ ಹೆಚ್ಚೆಂದರೆ 10 ಹಾಡುಗಳಿರಬಹುದು. ಆದರೆ ನೀವು ಎಂದಾದರೂ 71 ಹಾಡುಗಳಿರುವ ಸಿನಿಮಾದ ಬಗ್ಗೆ ಕೇಳಿದ್ದೀರಾ?

1932 ರಲ್ಲಿ ತೆರೆಕಂಡ ‘ಇಂದ್ರಸಭಾ’ ಹಿಂದಿ ಚಲನಚಿತ್ರದಲ್ಲಿ 71 ಹಾಡುಗಳಿದ್ದವು. ಎಲ್ಲ 71 ಹಾಡುಗಳನ್ನೂ ಮಾಸ್ಟರ್ ನಿಸ್ಸಾರ್ ಮತ್ತು ಜೆಹನಾರಾ ಕಜ್ಜಾನ್ ಇಬ್ಬರೇ ಹಾಡಿದ್ದರು. 71 ಹಾಡುಗಳ ಪೈಕಿ 31 ಗಜಲ್, 9 ತುಮ್ರಿಸ್ ಮುಂತಾದವುಗಳನ್ನು ಒಳಗೊಂಡಿತ್ತು. ಎಲ್ಲ ಹಾಡುಗಳು ನೃತ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿದ್ದವು.

‘ಇಂದ್ರಸಭಾ’ ಸಿನಿಮಾವನ್ನು ಸಯ್ಯದ್ ಅಗಾ ಹಸನ್ ಅವರ ಕಥೆಯನ್ನಾಧರಿಸಿ ನಿರ್ಮಾಣ ಮಾಡಲಾಗಿತ್ತು. ಜೆ.ಜೆ ಮದನ್ ಅವರು ಮದನ್ ಥಿಯೇಟರ್ಸ್ ಬ್ಯಾನರ್ ಅಡಿ ಈ ಸಿನೆಮಾವನ್ನು ನಿರ್ದೇಶಿಸಿದ್ದರು. ತನ್ನ ಹಾಡುಗಳ ಮೂಲಕ ‘ಇಂದ್ರಸಭಾ’ ವಿಶ್ವದಾಖಲೆಯನ್ನು ಕೂಡ ನಿರ್ಮಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...