alex Certify
ಕನ್ನಡ ದುನಿಯಾ       Mobile App
       

Kannada Duniya

ಗುಜರಾತ್ ನಲ್ಲೂ ಬ್ಯಾನ್ ಆಯ್ತು ‘ಪದ್ಮಾವತ’

ಸಂಜಯ್ ಲೀಲಾ ಬನ್ಸಾಲಿ ಚಿತ್ರ ಪದ್ಮಾವತಿ, ‘ಪದ್ಮಾವತ’ ಆಗಿ ತೆರೆಗೆ ಬರಲು ಸಿದ್ಧವಾಗಿದೆ. ಪದ್ಮಾವತ ತೆರೆಗೆ ಬರುವ ದಿನಾಂಕ ನಿಗಧಿಯಾಗ್ತಿದ್ದಂತೆ ಮತ್ತೆ ಪ್ರತಿಭಟನೆ ಚುರುಕು ಪಡೆದಿದೆ. ದೇಶದ ಅನೇಕ ಕಡೆ ಕರಣಿ ಸೇನೆ ಹೋರಾಟ ನಡೆಸುತ್ತಿದೆ.

ಈಗಾಗಲೇ ರಾಜಸ್ತಾನದಲ್ಲಿ ಚಿತ್ರವನ್ನು ನಿಷೇಧಿಸಲಾಗಿದೆ. ಈಗ ಗುಜರಾತ್ ಕೂಡ ಅದೇ ದಾರಿ ಹಿಡಿದಿದೆ. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದಾರೆ. ಶುಕ್ರವಾರ ಮಾತನಾಡಿದ ವಿಜಯ್ ರೂಪಾನಿ, ಗುಜರಾತ್ ನಲ್ಲಿ ಪದ್ಮಾವತ ತೆರೆಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಕರಣಿ ಸೇನೆ ಮುಖ್ಯಸ್ಥ ಅಹಮದಾಬಾದ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಸಂಜಯ್ ಲೀಲಾ ಬನ್ಸಾಲಿ ವಿರುದ್ಧ ಕಿಡಿಕಾರಿದ್ದಾರೆ. ಹೆಸರು ಬದಲಿಸುವುದ್ರಿಂದ ಎಲ್ಲವೂ ಸರಿಯಾಗುವುದಿಲ್ಲ. ಬನ್ಸಾಲಿ ಇತಿಹಾಸವನ್ನು ತಿರುಚಿದ್ದಾರೆಂದು ದೂರಿದ್ದಾರೆ.

ಇತ್ತ ಮುಂಬೈನಲ್ಲಿ ಕರಣಿ ಸೇನೆ ಶುಕ್ರವಾರವೂ ಪ್ರತಿಭಟನೆ ಮುಂದುವರೆಸಿದೆ. ಸೆನ್ಸಾರ್ ಬೋರ್ಡ್ ಮುಂದೆ ಪ್ರತಿಭಟನೆ ನಡೆಸಿದೆ. ಪದ್ಮಾವತ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ನೂರಾರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...