alex Certify
ಕನ್ನಡ ದುನಿಯಾ       Mobile App
       

Kannada Duniya

ಜಯಲಲಿತಾ ಪಾತ್ರದಲ್ಲಿ ಮಿಂಚೋರ್ಯಾರು?

ಸಿನಿಮಾ ನಿರ್ಮಾಪಕರಿಗೆ ಜೀವನ ಚರಿತ್ರೆ ಅಚ್ಚುಮೆಚ್ಚಿನ ವಿಷ್ಯವಾಗ್ತಿದೆ. ಜೀವನ ಚರಿತ್ರೆ ಆಧಾರಿತ ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿವೆ. ಶೀಘ್ರವೇ ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜಯಲಲಿತಾ ಜೀವನ ಕಥೆ ತೆರೆ ಮೇಲೆ ಬರಲಿದೆ. ಇದಕ್ಕೆ ಎಲ್ಲ ತಯಾರಿ ನಡೆಯುತ್ತಿದೆ. ಈ ಮಧ್ಯೆ ಅಮ್ಮನ ಪಾತ್ರದಲ್ಲಿ ಯಾರು ಮಿಂಚಲಿದ್ದಾರೆಂಬ ಬಗ್ಗೆ ಚರ್ಚೆ ಶುರುವಾಗಿದೆ.

ಜಯಲಲಿತಾ ಪಾತ್ರಕ್ಕೆ ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಹಾಗೂ ಅನುಷ್ಕಾ ಶೆಟ್ಟಿ ಹೆಸ್ರು ಕೇಳಿ ಬಂದಿದೆ. ಜಯಲಲಿತಾ ಮರಣದ ನಂತ್ರ ಹಲವು ಚಿತ್ರನಿರ್ಮಾಪಕರು ಜಯಲಲಿತಾ ಚಿತ್ರ ನಿರ್ಮಾಣಕ್ಕೆ ಮುಂದೆ ಬರ್ತಿದ್ದಾರೆ. ನಿರ್ಮಾಪಕ ವಿಜಯ್ ಹಾಗೂ ಪ್ರಿಯದರ್ಶಿನಿ ಚಿತ್ರ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದ್ರೀಗ ನಿರ್ಮಾಪಕ ಆದಿತ್ಯ ಭಾರದ್ವಾಜ್ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಪಿ.ಭಾರತಿರಾಜನ್ ಅವ್ರಿಗೆ ಚಿತ್ರದ ಹೊಣೆ ನೀಡಲಿದ್ದಾರೆ ಎನ್ನಲಾಗ್ತಿದೆ.

ಐಶ್ವರ್ಯ ರೈ ಬಚ್ಚನ್ ಹಾಗೂ ಅನುಷ್ಕಾ ಶೆಟ್ಟಿಗೆ ಆಫರ್ ನೀಡಲಾಗಿದೆ. ಇಬ್ರಲ್ಲಿ ಒಬ್ಬರು ನಿಶ್ಚಿತವೆಂದು ಭಾರದ್ವಾಜ್ ಹೇಳಿದ್ದಾರೆ. ಎಂಜಿಆರ್ ಪಾತ್ರದಲ್ಲಿ ಕಮಲ್ ಹಾಸನ್ ಅಥವಾ ಮೋಹನ್ ಲಾಲ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...