alex Certify
ಕನ್ನಡ ದುನಿಯಾ       Mobile App
       

Kannada Duniya

ಫಿಲ್ಮ್ ಫೇರ್ ನಲ್ಲಿ ಆಲಿಯಾ-ಅಮೀರ್ ಬೆಸ್ಟ್

ali-bhatt-filmfare_650x400_81484450177

ಮುಂಬೈನ ಎನ್ ಎಸ್ ಸಿ ಎಲ್ ನಲ್ಲಿ 62ನೇ ಫಿಲ್ಮ್ ಫೇರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ಜಿಯೋ ಫಿಲ್ಮ್ ಫೇರ್ ಅವಾರ್ಡ್ 2017 ಕಾರ್ಯಕ್ರಮವನ್ನು ನಟ ಶಾರುಖ್ ಖಾನ್, ಕರಣ್ ಜೋಹರ್ ಹಾಗೂ ಕಪಿಲ್ ಶರ್ಮಾ ನಡೆಸಿಕೊಟ್ಟರು.  ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ನಟ ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರ ಇಲ್ಲೂ ತನ್ನ ಆರ್ಭಟ ತೋರಿದೆ. ದಂಗಲ್ ನಟನೆಗಾಗಿ ಅಮೀರ್ ಖಾನ್ ಉತ್ತಮ ನಟ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಉಡ್ತಾ ಪಂಜಾಬ್ ಆ್ಯಕ್ಟಿಂಗ್ ಗಾಗಿ ಆಲಿಯಾ ಭಟ್ ಉತ್ತಮ ನಟಿ ಪ್ರಶಸ್ತಿ ಪಡೆದಿದ್ದಾಳೆ.

ದಂಗಲ್ ನಿರ್ದೇಶಕ ನಿತೇಶ್ ಉತ್ತಮ ನಿರ್ದೇಶಕ ಪಟ್ಟ ಗಿಟ್ಟಿಸಿಕೊಂಡರೆ,ಉತ್ತಮ ಚಿತ್ರ ಕೂಡ ದಂಗಲ್ ಪಾಲಾಗಿದೆ. ಬೆಸ್ಟ್ ಮ್ಯೂಜಿಕ್ ಆಲ್ಬಂ ಎ ದಿಲ್ ಹೇ ಮುಷ್ಕಿಲ್ ನ ಪ್ರೀತಂ ಪಾಲಾಗಿದೆ. ಅರ್ಜಿತ್ ಸಿಂಗ್ ಹಿನ್ನೆಲೆ ಗಾಯಕ ಹಾಗೂ ನೇಹಾರಿಗೆ ಉತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಸಿಕ್ಕಿದೆ. ಪಿಂಕ್ ಚಿತ್ರದ ಸಂಭಾಷಣೆಗಾಗಿ ರಿತೇಶ್ ಶಾ ಉತ್ತಮ ಸಂಭಾಷಣಾಕಾರ ಪ್ರಶಸ್ತಿ ಪಡೆದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...