alex Certify
ಕನ್ನಡ ದುನಿಯಾ       Mobile App
       

Kannada Duniya

ಫಿಲ್ಮ್ ನಲ್ಲಿ ಧರಿಸಿದ ಡ್ರೆಸ್ ಎಲ್ಲಿಗೆ ಹೋಗುತ್ತೆ ಗೊತ್ತಾ..?

bollywiid

ರಂಗೀನ್ ದುನಿಯಾ ಯಾವಾಗಲೂ ರಂಗು ರಂಗಾಗಿಯೇ ಇರುತ್ತದೆ. ಚಲನಚಿತ್ರಗಳಲ್ಲಿ ನಟ, ನಟಿಯರಿಂದ ಹಿಡಿದು ಹಿಂದೆ ಡಾನ್ಸ್ ಮಾಡುವವರೆಗೆ ಎಲ್ಲರೂ ವೆರೈಟಿ ಡ್ರೆಸ್ ಧರಿಸುತ್ತಾರೆ. ಅಭಿಮಾನಿಗಳನ್ನು ಆಕರ್ಷಿಸಲು ಹಾಗೂ ಚಿತ್ರ ಅದ್ಧೂರಿಯಾಗಿ ಬರಲು ದುಬಾರಿ ಬೆಲೆಯ ಡ್ರೆಸ್ ಬಳಸ್ತಾರೆ. ಚಿತ್ರ ಮುಗಿದ ನಂತ್ರ ಆ ಬಟ್ಟೆಗಳು ಎಲ್ಲಿಗೆ ಹೋಗುತ್ತವೆ ಎಂಬ ಪ್ರಶ್ನೆ ಸಾಮಾನ್ಯ ಜನರನ್ನು ಕಾಡುವುದು ಸಾಮಾನ್ಯ.

ಚಲನಚಿತ್ರಗಳಲ್ಲಿ ಧರಿಸಲಾಗುವ ಬಟ್ಟೆಗಳನ್ನು ಸುರಕ್ಷಿತವಾಗಿಡುವುದು ಪ್ರೊಡಕ್ಷನ್ ಹೌಸ್ ಜವಾಬ್ದಾರಿ. ಚಿತ್ರದಲ್ಲಿ ಬಳಸಿದ ಪ್ರತಿಯೊಂದು ಬಟ್ಟೆಯನ್ನು ಪ್ಯಾಕ್ ಮಾಡಿ ಅದರ ಮೇಲೆ ಚಿತ್ರದ ಹೆಸರು ಹಾಗೂ ಚಿತ್ರ ತೆರೆಗೆ ಬಂದ ದಿನಾಂಕವನ್ನು ನಮೂದಿಸಿಡಲಾಗುತ್ತದೆ. ಅವಶ್ಯಕತೆ ಬಿದ್ದಾಗ ಸಣ್ಣ ಹಾಗೂ ಕಡಿಮೆ ಬಜೆಟ್ಟಿನ ಚಿತ್ರಗಳಿಗೆ ಈ ಬಟ್ಟೆಗಳನ್ನು ಬಳಸಲಾಗುತ್ತದೆ.

ಬಟ್ಟೆಗಳನ್ನು ನಟ-ನಟಿಯರು ತೆಗೆದುಕೊಂಡು ಹೋಗಬಹುದು. ಆದ್ರೆ ನಿರ್ಮಾಪಕರ ಅನುಮತಿ ಬೇಕು. ಚಿತ್ರ ತೆರೆಗೆ ಬಂದ ನಂತ್ರ ನಟರು ಇಷ್ಟವಾದ್ರೆ ತಾವು ಧರಿಸಿದ್ದ ಬಟ್ಟೆಯನ್ನು ಮನೆಗೆ ಕೊಂಡೊಯ್ಯಬಹುದು. ಕೆಲವೊಮ್ಮೆ ತಮ್ಮ ವೈಯಕ್ತಿಕ ಬಟ್ಟೆಗಳನ್ನೂ ಹಿರೋ, ಹಿರೋಯಿನ್ಸ್ ಚಿತ್ರಕ್ಕೆ ಬಳಸುತ್ತಾರೆ. ಆದ್ರೆ ಚಿತ್ರ ತೆರೆಗೆ ಬರುವವರೆಗೆ ಅದನ್ನು ಸಾರ್ವಜನಿಕ ಸ್ಥಳಗಳಿಗೆ ಹಾಕಿಕೊಂಡು ಹೋಗುವುದಿಲ್ಲ.

ಚಿತ್ರ ತೆರೆಗೆ ಬಂದು ಎರಡು, ಮೂರು ವರ್ಷ ಕಳೆದ ನಂತ್ರ ಅದೇ ಬಟ್ಟೆಯನ್ನು ಮತ್ತೆ ಉಪಯೋಗಿಸಲಾಗುತ್ತದೆ. ಕೆಲವೊಮ್ಮೆ ಅವುಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿದ್ರೆ, ಮತ್ತೆ ಕೆಲವೊಮ್ಮೆ ಹಿರೋಯಿನ್ ಧರಿಸಿದ್ದ ಬಟ್ಟೆಯನ್ನು ಸಣ್ಣ ಪುಟ್ಟ ನಟರು ಹಾಕಿಕೊಳ್ಳುತ್ತಾರೆ. ಇಷ್ಟೇ ಅಲ್ಲ ಸಮಾಜ ಸೇವೆ ರೂಪದಲ್ಲಿಯೂ ಇದನ್ನು ಉಪಯೋಗಿಸಲಾಗುತ್ತದೆ. ಆನ್ಲೈನ್ ಮೂಲಕ ಬಟ್ಟೆಗಳನ್ನು ಮಾರಾಟ ಮಾಡಿ, ಬಂದ ಹಣವನ್ನು ಅವಶ್ಯಕತೆ ಇರುವವರಿಗೆ ನೀಡಿದ ಉದಾಹರಣೆಗಳೂ ಇವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...