alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಲು ಅಪಾರ್ಟ್ಮೆಂಟ್ ಗೆ ನುಗ್ಗಿ ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ

ಅಭಿಮಾನ ಅತಿರೇಕಕ್ಕೇರಿದ್ರೆ ಏನು ಬೇಕಾದ್ರೂ ಮಾಡ್ತಾರೆ. ಇದಕ್ಕೆ ಸಲ್ಮಾನ್ ಖಾನ್ ಅಭಿಮಾನಿ ಉತ್ತಮ ಉದಾಹರಣೆ. ಸಲ್ಮಾನ್ ಖಾನ್ ಅಭಿಮಾನಿಯೊಬ್ಬಳು ಸಲ್ಲು ಮನೆಯೊಳಗೆ ಪ್ರವೇಶ ಮಾಡಿದ್ದಲ್ಲದೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಸಲ್ಮಾನ್ ಖಾನ್ ಅಪಾರ್ಟ್ಮೆಂಟ್ ಗೆ ಒಪ್ಪಿಗೆ ಇಲ್ಲದೆ ಬಂದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸಲ್ಮಾನ್ ಖಾನ್ ನನ್ನ ಗಂಡ ಎಂದು ಕೂಗಿದ್ದಾಳೆ. ಘಟನೆ ಐದು ದಿನಗಳ ಹಿಂದೆ ನಡೆದಿದೆ ಎನ್ನಲಾಗಿದೆ. ಸಲ್ಮಾನ್ ಖಾನ್ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಗೆ ಮಧ್ಯಾಹ್ನ 12 ಗಂಟೆ 30 ನಿಮಿಷಕ್ಕೆ ಬಂದಿದ್ದಾಳೆ.

ಸದಾ ಸಲ್ಮಾನ್ ಖಾನ್ ಅಪಾರ್ಟ್ ಮೆಂಟ್ ಗೆ ಬಿಗಿ ಭದ್ರತೆ ಒದಗಿಸಲಾಗಿರುತ್ತದೆ. ಆದ್ರೆ ಘಟನೆ ನಡೆದ ದಿನ ಒಬ್ಬ ಗಾರ್ಡ್ ರಜೆಯಲ್ಲಿದ್ದ ಎನ್ನಲಾಗಿದೆ. ಉಳಿದವರು ಹೊಸಬರಾಗಿದ್ದರಿಂದ ಯುವತಿ ಆರಾಮವಾಗಿ ಅಪಾರ್ಟ್ಮೆಂಟ್ ಒಳಗೆ ನುಗ್ಗಿದ್ದಾಳೆ. ನೇರವಾಗಿ ಟೆರೆಸ್ ಗೆ ಹೋದ ಯುವತಿ ಬಾಗಿಲು ಬಡಿದಿದ್ದಾಳೆ. ಸಲ್ಮಾನ್ ಖಾನ್ ಕುಕ್ ಬಾಗಿಲು ತೆರೆದಿದ್ದಾರೆ. ತಕ್ಷಣ ಸಲ್ಮಾನ್ ಖಾನ್ ನನ್ನ ಗಂಡ ಎಂದು ಯುವತಿ ಕೂಗಾಡಿದ್ದಾಳೆ.

ನಂತ್ರ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ. ತಕ್ಷಣ ಸೆಕ್ಯೂರಿಟಿಯನ್ನು ಕರೆದು ಯುವತಿಯನ್ನು ರಕ್ಷಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...