alex Certify
ಕನ್ನಡ ದುನಿಯಾ       Mobile App
       

Kannada Duniya

ಮಲತಾಯಿಗೆ ಬೆಲೆ ಕೊಡದ ನಟನಿಗೆ ತರಾಟೆ

17shabana-azmi6-1500030896

ಶ್ರದ್ಧಾ ಕಪೂರ್ ಜೊತೆಗೆ ಅಫೇರ್, ಆದಿತ್ಯ ರಾಯ್ ಕಪೂರ್ ಜೊತೆಗೆ ಕಿತ್ತಾಟ ಹೀಗೆ ಹಲವು ವಿವಾದಗಳಿಂದ್ಲೇ ನಟ ಫರ್ಹಾನ್ ಅಖ್ತರ್ ಕಳೆದ ಕೆಲದಿನಗಳಿಂದ ಸುದ್ದಿಯಲ್ಲಿದ್ದಾರೆ. ಈ ಬಾರಿ ವಿಚಿತ್ರ ಕಾರಣವೊಂದರಿಂದ ವಿವಾದದ ಸುಳಿಗೆ ಸಿಲುಕಿದ್ದಾರೆ.

ತಂದೆ ಜಾವೇದ್ ಅಖ್ತರ್ ಹಾಗೂ ಮಲತಾಯಿ ಶಬಾನಾ ಅಜ್ಮಿ ಜೊತೆ ವೇದಿಕೆ ಹಂಚಿಕೊಂಡಿದ್ದ ಫರ್ಹಾನ್ ಅದನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ರು. ಆದ್ರೆ ಟ್ವೀಟ್ ನಲ್ಲಿ ಫರ್ಹಾನ್ ಮಾಡಿದ್ದ ಪ್ರಮಾದವನ್ನು ಟ್ವಿಟ್ಟರ್ ಬಳಕೆದಾರನೊಬ್ಬ ಪತ್ತೆ ಮಾಡಿದ್ದಾನೆ.

ಗೊತ್ತಿದ್ದೋ ಗೊತ್ತಿಲ್ಲದೆಯೋ ಫರ್ಹಾನ್ ಅಖ್ತರ್, ಶಬಾನಾ ಅಜ್ಮಿ ಅವರನ್ನು ಅಮ್ಮ ಅಂತಾ ಕರೆದಿಲ್ಲ. ಅವರ ಪೂರ್ತಿ ಹೆಸರು ಹೇಳಿಯೂ ಸಂಭೋದಿಸಿಲ್ಲ. ಬದಲಾಗಿ ಶಬಾನಾ ಅಂತಾ ಬರೆದುಕೊಂಡಿದ್ದಾರೆ. ತಂದೆ ಹಾಗೂ ಶಬಾನಾ ಜೊತೆಗೆ ವೇದಿಕೆ ಹಂಚಿಕೊಂಡಿದ್ದು ಹೆಮ್ಮೆ ತಂದಿದೆ ಅಂತಾ ಟ್ವೀಟ್ ಮಾಡಿದ್ದಾರೆ.

ಶಬಾನಾ ಅಜ್ಮಿ ಅವರನ್ನು ಅಮ್ಮ ಎಂದು ಕರೆಯಲು ಸಾಧ್ಯವಾಗದೇ ಇದ್ರೂ ಬಹುವಚನ ಕೊಟ್ಟಾದ್ರೂ ಕರೆಯಬಹುದಿತ್ತು ಅಂತಾ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.  ಅವರ ವಯಸ್ಸಿಗಾದ್ರೂ ಗೌರವ ಕೊಡಿ ಅಂತಾ ಟ್ವೀಟ್ ಮಾಡಿದ್ದಾರೆ. ಅಭಿಮಾನಿಗಳ ಅಸಮಾಧಾನವನ್ನು ಗಮನಿಸಿದ್ರೂ ಫರ್ಹಾನ್ ಅಖ್ತರ್ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...