alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ಯಾಷನ್ ಶೋನಲ್ಲಿ ಸುಂದರಿ ತೊಟ್ಟಿದ್ದ ಬ್ರಾ ಬೆಲೆ ಕೇಳಿದ್ರೆ….

ಶಾಂಘೈನಲ್ಲಿ ನಡೆದ ವಿಕ್ಟೋರಿಯಾ ಸೀಕ್ರೆಟ್ ಫ್ಯಾಷನ್ ಶೋ ಇಡೀ ವಿಶ್ವದ ಕಣ್ಣುಕುಕ್ಕಿದೆ. ಸಾಮಾಜಿಕ ತಾಣಗಳಲ್ಲಂತೂ ಸೆಕ್ಸೀ ಮಾಡೆಲ್ ಗಳ ಫೋಟೋಗಳು ಹರಿದಾಡುತ್ತಿವೆ.

ಅಡ್ರಿಯಾನಾ ಲಿಮಾ, ಬೆಲ್ಲಾ ಹ್ಯಾಡಿಡ್, ಅಲೆಸಾಂಡ್ರ ಅಂಬ್ರೊಸಿಯೋ, ಕಾರ್ಲೀ ಕ್ಲೋಸ್ ಸೇರಿದಂತೆ ನೂರಾರು ಚೆಲುವೆಯರು ಒಳ ಉಡುಪಿನಲ್ಲಿ ತಮ್ಮ ಸೌಂದರ್ಯ ಪ್ರದರ್ಶಿಸಿದ್ದಾರೆ.

ಈ ಫ್ಯಾಷನ್ ಶೋನ ಪ್ರಮುಖ ಆಕರ್ಷಣೆ ಯಾರು ಗೊತ್ತಾ? 27ರ ಹರೆಯದ ಬ್ರೆಜಿಲ್ ನ ರೂಪದರ್ಶಿ ಲೇಯಿಸ್ ರಿಬಿರೋ. ಈ ಸುಂದರಿ ತೊಟ್ಟಿದ್ದ ಬ್ರಾ ಫ್ಯಾಷನ್ ಶೋದ ಹೈಲೈಟ್. ಯಾಕಂದ್ರೆ ಇದರ ಬೆಲೆ ಬರೋಬ್ಬರಿ 2 ಮಿಲಿಯನ್ ಡಾಲರ್.

ಸರಿಸುಮಾರು 13 ಕೋಟಿ ರೂಪಾಯಿ ಬೆಲೆಬಾಳುವ ಬ್ರಾ ತೊಟ್ಟು ಲೇಯಿಸ್ ಕ್ಯಾಟ್ ವಾಕ್ ಮಾಡಿದ್ದಾಳೆ. ಇದರಲ್ಲಿ 600 ಕ್ಯಾರೆಟ್ ವಜ್ರವಿದೆ. 18 ಕ್ಯಾರೆಟ್ ಚಿನ್ನದಲ್ಲಿ ಬಗೆಬಗೆಯ ವಜ್ರಗಳಿಂದ ಅಲಂಕರಿಸಲಾಗಿದೆ.

ಕೋಟಿ ಕೋಟಿ ಬೆಲೆಬಾಳುವ ಈ ಬ್ರಾ ನೋಡಿ ಜನರು ದಂಗಾಗಿದ್ದಾರೆ. ಇನ್ ಸ್ಟಾಗ್ರಾಮ್ ಪೇಜ್ ನಲ್ಲಂತೂ ಫ್ಯಾಂಟಸಿ ಬ್ರಾ ಫೋಟೋಗಳೇ ಹರಿದಾಡುತ್ತಿವೆ. ಆದ್ರೆ ಇದು ಜಗತ್ತಿನ ಅತ್ಯಂತ ದುಬಾರಿ ಬ್ರಾ ಅಲ್ಲ.

ಅತಿ ದುಬಾರಿ ಬ್ರಾ ಬೆಲೆ ಎಷ್ಟು ಗೊತ್ತಾ? 15 ಮಿಲಿಯನ್ ಡಾಲರ್. 2000ನೇ ಇಸ್ವಿಯಲ್ಲಿ ಮಾಡೆಲ್ ಗಿಸೆಲ್ ಬುಂಡ್ಜನ್ ಇದನ್ನು ಧರಿಸಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...