alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿಗಳ ಮನೆಗೆ ಭೇಟಿ ನೀಡಿದ ಕಿಚ್ಚ ಸುದೀಪ್

sude-ctd

ಚಿತ್ರದುರ್ಗ: ಸ್ಟಾರ್ ನಟ, ನಟಿಯರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚು. ಬಹುತೇಕ ಅಭಿಮಾನಿಗಳು ತಮ್ಮ ಇಷ್ಟದ ಕಲಾವಿದರನ್ನು ಆರಾಧಿಸುತ್ತಾರೆ.

ಕೆಲವರು ಹಚ್ಚೆ ಹಾಕಿಸಿಕೊಂಡರೆ, ಮತ್ತೆ ಕೆಲವರು ಮನೆಯಲ್ಲಿ ಫೋಟೋ ಇಟ್ಟುಕೊಂಡಿರುತ್ತಾರೆ. ವಾಹನಗಳ ಮೇಲೆ ನೆಚ್ಚಿನ ನಟರ, ಅವರ ಸಿನಿಮಾಗಳ ಸ್ಟಿಕರ್ ಹಾಕಿಕೊಳ್ಳುತ್ತಾರೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಬಗ್ಗನಾಡು ಗ್ರಾಮದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳ ಅಭಿಮಾನ ಉಕ್ಕಿ ಹರಿಯುವಂತಿದೆ.

ಈ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರಿದ್ದು, ಬಹುತೇಕರ ಮನೆಯಲ್ಲಿ ಸುದೀಪ್ ಅಭಿಮಾನಿಗಳಿದ್ದಾರೆ. ನಿತ್ಯವೂ ಸುದೀಪ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತಾರೆ.

ಸುಮಾರು 500 ಮನೆಗಳಿರುವ ಗ್ರಾಮದಲ್ಲಿ ಅಭಿಮಾನಿಗಳು, ಸುದೀಪ್ ಹುಟ್ಟುಹಬ್ಬದ ಸಂದರ್ಭದಲ್ಲಿ ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಾರೆ.

ಹಬ್ಬ ಹರಿದಿನಗಳಲ್ಲಿ ಸುದೀಪ್ ಫ್ಲೆಕ್ಸ್, ಕಟೌಟ್ ಹಾಕಿ ಸಂಭ್ರಮಿಸುತ್ತಾರೆ. ತಮ್ಮ ಗ್ರಾಮಕ್ಕೆ ಸುದೀಪ್ ಒಮ್ಮೆ ಬರಬೇಕೆಂಬುದು ಈ ಗ್ರಾಮದ ಯುವ ಅಭಿಮಾನಿಗಳ ಆಸೆಯಾಗಿತ್ತು.

ಕಡೆಗೂ ಅಭಿಮಾನಿಗಳ ಕರೆಗೆ ಓಗೊಟ್ಟ ಸುದೀಪ್ ಬಗ್ಗನಾಡು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಸುದೀಪ್ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಿ, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ ಅಭಿಮಾನಿಗಳು ಜೈಕಾರ ಹಾಕಿದ್ದಾರೆ.

ಅಭಿಮಾನಿಗಳ ಅಭಿಮಾನಕ್ಕೆ ಕಿಚ್ಚ ಸುದೀಪ್ ಮನಸೋತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...