alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ ಮಗನೊಂದಿಗಿರುವ ಅಜಯ್ ದೇವಗನ್ ಫೋಟೋ

ನಟ ಅಜಯ್ ದೇವಗನ್ ಕುಟುಂಬದೊಂದಿಗೆ ಪ್ಯಾರಿಸ್ ನಲ್ಲಿದ್ದಾರೆ. ಜನ್ಮ ದಿನದ ಸಂಭ್ರಮದಲ್ಲಿರುವ ಅಜಯ್ ದೇವಗನ್, ಪ್ಯಾರಿಸ್ ನಲ್ಲಿಯೇ ಪತ್ನಿ ಕಾಜೋಲ್, ಪುತ್ರಿ ನ್ಯಾಸಾ ಹಾಗೂ ಪುತ್ರ ಯುಗ್ ಜೊತೆ ಬರ್ತಡೇ ಆಚರಿಸಿಕೊಂಡಿದ್ದಾರೆ.

ಅಜಯ್ ದೇವಗನ್ ಫ್ಯಾಮಿಲಿ ಮ್ಯಾನ್ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಬಿಡುವ ಸಿಕ್ಕಾಗಲೆಲ್ಲಾ ಫ್ಯಾಮಿಲಿ ಜೊತೆ ಕಾಲ ಕಳೆಯುವ ಅಜಯ್ ದೇವಗನ್, ಅಭಿಮಾನಿಗಳಿಗಾಗಿ ಕುಟುಂಬ ಸದಸ್ಯರೊಂದಿಗಿನ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ.

ಆದರೆ ಈಗ ಪ್ಯಾರಿಸ್ ನಲ್ಲಿ ಮಗನೊಂದಿಗೆ ತೆಗೆಸಿಕೊಂಡಿರುವ ಫೋಟೋ ಒಂದು ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಅಜಯ್ ದೇವಗನ್ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಮಗ ಯುಗ್ ಜೊತೆ ಇರುವ ಫೋಟೋ ಶೇರ್ ಮಾಡುತ್ತಿದ್ದಂತೆಯೇ ಅಭಿಮಾನಿಗಳಿಂದ ಭಾರೀ ಟೀಕೆ ವ್ಯಕ್ತವಾಗಿದೆ.

Before & After.

A post shared by Ajay Devgn (@ajaydevgn) on

ಅಷ್ಟಕ್ಕೂ ಅಭಿಮಾನಿಗಳ ಈ ಆಕ್ರೋಶಕ್ಕೆ ಕಾರಣವೇನು ಗೊತ್ತಾ. ಅಜಯ್ ದೇವಗನ್ ಒಂದು ಕೈನಲ್ಲಿ ಮಗನ ಮುಖವನ್ನು ಹಿಡಿದಿದ್ದರೆ ಮತ್ತೊಂದು ಕೈನಲ್ಲಿ ಸಿಗರೇಟ್ ಇದೆ. ಈ ವಿಚಾರವೇ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. ಸಿಗರೇಟ್ ಆರೋಗ್ಯಕ್ಕೆ ಹಾನಿಕರ ಎಂಬುದು ಒಂದು ಕಡೆಯಾದರೆ, ಪುಟ್ಟ ಮಗ ಜೊತೆಯಲ್ಲಿರುವಾಗ ಆತನ ಮುಂದೆ ಸಿಗರೇಟ್ ಸೇವನೆ ಮಾಡಿರುವುದು ಎಷ್ಟು ಸೂಕ್ತ ಎಂಬ ಪ್ರಶ್ನೆಯನ್ನಿಟ್ಟಿದ್ದಾರೆ ಅಭಿಮಾನಿಗಳು. ಚಿಕ್ಕ ಮಕ್ಕಳ ಮುಂದೆ ಇಂತದ್ದನ್ನೆಲ್ಲಾ ಮಾಡಬೇಡಿ ಎಂಬ ಸಲಹೆಯನ್ನೂ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...