alex Certify
ಕನ್ನಡ ದುನಿಯಾ       Mobile App
       

Kannada Duniya

ನೆಚ್ಚಿನ ನಟನ ನೋಡಲು ಮುಗಿಬಿದ್ದ ಅಭಿಮಾನಿಗಳು

kutty-thala1.jpg.image.784.410

ತೆರೆ ಮೇಲೆ ಕಾಣುವ ತಮ್ಮ ನೆಚ್ಚಿನ ನಟ- ನಟಿಯರನ್ನು ಪ್ರತ್ಯಕ್ಷವಾಗಿ ಕಾಣಲು ಅಭಿಮಾನಿಗಳು ಕಾತರಿಸುತ್ತಾರೆ. ಹೀಗೆ ಕಣ್ಣಿಗೆ ಬಿದ್ದ ವೇಳೆ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ತವಕಿಸುತ್ತಾರೆ. ಪಾಸ್ ಪೋರ್ಟ್ ಕಛೇರಿಗೆ ಕಾರ್ಯನಿಮಿತ್ತ ತೆರಳಿದ್ದ ಖ್ಯಾತ ನಟರೊಬ್ಬರು ಅಭಿಮಾನಿಗಳ ನಡುವೆ ಸಿಕ್ಕಿಬಿದ್ದ ಘಟನೆ ನಡೆದಿದೆ.

ಹೌದು. ತಮಿಳಿನ ಖ್ಯಾತ ನಟ ಅಜಿತ್, ವಿದೇಶ ಪ್ರವಾಸಕ್ಕೆ ತೆರಳುವ ಸಲುವಾಗಿ ಕಳೆದ ವರ್ಷ ಜನಿಸಿರುವ ತಮ್ಮ ಪುತ್ರ ಅದ್ವಿಕ್, ಪಾಸ್ ಪೋರ್ಟ್ ಮಾಡಿಸುವುದಕ್ಕೆ ಪತ್ನಿ ಶಾಲಿನಿ ಹಾಗೂ ಪುತ್ರಿ ಅನುಷ್ಕಾ ಜೊತೆ ಚೆನ್ನೈನ ಪಾಸ್ ಪೋರ್ಟ್ ಕಛೇರಿಗೆ ತೆರಳಿದ್ದರು.

ಅಜಿತ್ ಪಾಸ್ ಪೋರ್ಟ್ ಕಛೇರಿಗೆ ಆಗಮಿಸಿರುವ ವಿಚಾರ ಕ್ಷಣಮಾತ್ರದಲ್ಲೇ ಹಬ್ಬಿದ್ದು, ನೂರಾರು ಮಂದಿ ಅಭಿಮಾನಿಗಳು ಪಾಸ್ ಪೋರ್ಟ್ ಕಛೇರಿ ಬಳಿ ಜಮಾಯಿಸಿದ್ದಾರೆ. ಹೊರಗೆ ಬಂದ ಅಜಿತ್, ಅಭಿಮಾನಿಗಳಿಗೆ ವಿಶ್ ಮಾಡುತ್ತಲೇ ಹತ್ತಿರದಿಂದ ಕಾಣಲು ಮುಗಿಬಿದ್ದಿದ್ದಾರೆ. ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿಗೆ ಸಾಕುಸಾಕಾಗಿದೆ. ಕಡೆಗೂ ಅಭಿಮಾನಿಗಳ ಮಧ್ಯದಿಂದ ಹೊರ ಬಂದ ಅಜಿತ್ ಅಲ್ಲಿಂದ ತೆರಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...