alex Certify
ಕನ್ನಡ ದುನಿಯಾ       Mobile App
       

Kannada Duniya

ಸಿನಿಮಾ ಪ್ರಿಯರಿಗೆ ಇಲ್ಲಿದೆ ಸಿಹಿಸುದ್ದಿ

ganesh-d

ಸ್ಯಾಂಡಲ್ ವುಡ್ ನಲ್ಲಿ ಇನ್ನಾರು ತಿಂಗಳು ಹಬ್ಬ ಗ್ಯಾರಂಟಿ ಅನೇಕ ಸ್ಟಾರ್ ನಟರ ಚಿತ್ರಗಳು ಚಿತ್ರೀಕರಣ ಹಂತದಲ್ಲಿದ್ದು, ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಲು ಚಿತ್ರತಂಡಗಳು ಪ್ಲಾನ್ ಮಾಡಿಕೊಂಡಿವೆ.

ಆಗಸ್ಟ್ 15 ರಂದು ಶಿವರಾಜ್ ಕುಮಾರ್ ಅಭಿನಯದ ‘ಲೀಡರ್’ ರಿಲೀಸ್ ಆಗುವ ಸಾಧ್ಯತೆ ಇದೆ. ಇನ್ನು ವರಮಹಾಲಕ್ಷ್ಮಿ ಹಬ್ಬಕ್ಕೆ ಗಣೇಶ್ ಅಭಿನಯದ, ಯೋಗರಾಜ್ ಭಟ್ ನಿರ್ದೇಶನದ ‘ಮುಗುಳು ನಗೆ’ ತೆರೆಗೆ ಬರಲು ಸಜ್ಜಾಗಿದೆ.

ದಸರಾ ಹಬ್ಬಕ್ಕೆ ಪುನೀತ್ ರಾಜ್ ಕುಮಾರ್ ಅಭಿನಯದ, ಹರ್ಷ ನಿರ್ದೇಶನ, ಎಂ.ಎನ್. ಕುಮಾರ್ ನಿರ್ಮಾಣದ ‘ಅಂಜನಿಪುತ್ರ’ ತೆರೆ ಕಾಣುವ ಸಾಧ್ಯತೆ ಇದೆ. ಇದೇ ವೇಳೆಗೆ ಶಿವಣ್ಣ ಅಭಿನಯದ ಸೂರಿ ನಿರ್ದೇಶನದ ‘ಟಗರು’ ರಿಲೀಸ್ ಆಗಲು ರೆಡಿಯಾಗ್ತಿದೆ.

ಗೌರಿ ಗಣೇಶ ಹಬ್ಬಕ್ಕೆ ‘ಭರ್ಜರಿ’ ಬರಬಹುದಾಗಿದೆ. ಧ್ರುವ ಸರ್ಜಾ, ರಚಿತಾ ರಾಮ್ ಅಭಿನಯಿಸಿರುವ ಈ ಚಿತ್ರವನ್ನು ಆರ್.ಎಸ್. ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದ್ದು, ‘ಬಹದ್ದೂರ್’ ಚೇತನ್ ನಿರ್ದೇಶಿಸಿದ್ದಾರೆ.

ಇನ್ನು ಕ್ರಿಸ್ ಮಸ್ ವೇಳೆಗೆ ಯಶ್ ಅಭಿನಯದ ‘ಕೆ.ಜಿ.ಎಫ್.’ ಬರಲಿದೆ. ಸುದೀಪ್, ಶಿವಣ್ಣ ಅಭಿನಯದ ‘ದಿ ವಿಲನ್’, ಮುರಳಿ, ಶಿವಣ್ಣ ಅಭಿನಯದ ‘ಮಫ್ತಿ’ ಕೂಡ ಇದೇ ವೇಳೆಗೆ ತೆರೆ ಕಾಣುವ ಸಾಧ್ಯತೆ ಇದೆ.

ಹಬ್ಬಗಳ ಹೊರತಾಗಿಯೂ ಎಂದಿನಂತೆ ಸಿನಿಮಾ ರಿಲೀಸ್ ಆಗಲಿದ್ದು, ಸಿನಿ ರಸಿಕರಿಗೆ ಇನ್ನಾರು ತಿಂಗಳು ಸುಗ್ಗಿ ಗ್ಯಾರಂಟಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...